Friday, 29 April 2016

ಉಗಾದಿ ಭವಿಷ್ಯ ೨೦೧೬ (೦೮-೦೪-೨೦೧೬) ಚೈತ್ರ ಶುಕ್ಲ ಪ್ರತಿಪತ್ ತಿಥಿ (ಭಾಗ-೧, ಮೇಷದಿಂದ ಕನ್ಯಾದವರೆಗೆ)

ಉಗಾದಿ ಭವಿಷ್ಯ ೨೦೧೬ (೦೮-೦೪-೨೦೧೬) ಚೈತ್ರ ಶುಕ್ಲ ಪ್ರತಿಪತ್ ತಿಥಿ.

ದುರ್ಮುಖಿ ನಾಮ ಸಂವತ್ಸರ, ವಸಂತ ಋತು, ಉತ್ತರಾಯಣ ಪುಣ್ಯ ಕಾಲ.  ವರ್ಷದ ಅಧಿಪತಿ ಶುಕ್ರ.
ಉಗಾದಿ ಹಬ್ಬ ಏಪ್ರಿಲ್ ೮, ೨೦೧೬ ರಂದು. ಚೈತ್ರ ಶುಕ್ಲ ಪರತಿಪದಿಯಾಂಧಿತೌ, ಶುಕ್ರವಾರ
ಈ ಯುಗ ಮತ್ತು ಆದಿ ಅಂದರೆ ಆಸ್ಟ್ರೋನೋಮಿಕಲ್ ಶುರುವಾತ್ ಅಂತ ಅರ್ಥ. ಚಳಿಗಾಲ ಹೋಗಿ ಸ್ಪ್ರಿಂಗ್ ಸೇಸನ್ ಬಂತು ಎಂಬರ್ಥ.ಇದನ್ನೇ ವಸಂತ ಋತು ಎನ್ನುತ್ತೇವೆ. ವಸಂತದಲ್ಲಿ ಹೂಗಳೆಲ್ಲಾ ಅರಳುತ್ತವೆ.
ಉಗಾದಿ ಎನ್ನುವುದು ತೆಲುಗು ಹಾಗೂ ಕನ್ನಡ ಜನರಿಗೆ ಒಂದು ಹೊಸ ವರ್ಷ.ಉಗಾದಿಯಲ್ಲಿ ಎರಡು ಉಗಾದಿ ಬರುತ್ತದೆ. ಒಂದು ಚಾಂದ್ರಮಾನ ಉಗಾದಿ ಇನ್ನೊಂದು ಸೌರಮಾನ ಉಗಾದಿ. ಈ ಚಾದ್ರಮಾನ ಉಗಾದಿ ಎನ್ನುವುದು ಚಂದ್ರನನ್ನ ಆಧಾರ ಮಾಡಿ ಬರುವಂತಹದ್ದು. ಅದೇ ಸೌರಮಾನ ಉಗಾದಿ ಎನ್ನುವುದು ಸೂರ್ಯನನ್ನ ಆಧಾರ ಮಾಡಿ ಬರುವಂತಹದ್ದು. ಅಂದರೆ ಸಂಕ್ರಾಂತಿಯ ಮರುದಿನ ಬರುತ್ತದೆ. ಈ ಸೌರಮಾನ ಉಗಾದಿಯನ್ನ ನಮ್ಮ ದಕ್ಷಿಣ ಕನ್ನಡ ಹಾಗೂ ಉಡೂಪಿಯ ಜನರು, ಹಾಗೂ ಟಾಮಿಲ್ನಾಡು ಮತ್ತು ಕೇರಳದಲ್ಲಿ ವಾಸಿಸುವವರು ಆಚರಿಸುತ್ತಾರೆ. ಆದ್ದರಿಂದ ಚಾಂದ್ರಮಾನ ಉಗಾದಿ ಇದೇ ತಿಂಗಳು ಏಪ್ರಿಲ್ ೮ ರಂದು ಬಂದಲ್ಲಿ, ಸೌರಮಾನ ಉಗಾದಿ ಏಪ್ರಿಲ್ ೧೪ರಂದು ಬರುತ್ತದೆ.
ಇನ್ನು ದುರ್ಮುಖಿನಾಮ ಸಂವತ್ಸರದ ಚೈತ್ರ ಶುಕ್ಲ ಪಕ್ಷಃ, ಉತ್ತರಾಯಣ ವಸಂತಋತುಃ, ಶುಕ್ರವಾರ ಪ್ರತಿಪದಿಯಾಂಧಿತ್ ೧೬ ೩/೪ ಘಳಿಗೆ (ಮಧ್ಯಾಹ್ನ ಗಂಟೆ ೧.೦೫ ಕ್ಕೆ ಅಂತ್ಯ) ದ ವರೆಗೆ ಈ ಚಾಂದ್ರಮಾನ ಉಗಾದಿ ಇರುತ್ತದೆ. ಇದನ್ನ ಕೆನಡ,ಯೂ.ಕೇ ಯವರು ಏಪ್ರಿಲ್ ೭ರಂದು ಆಚರಿಸಿದರೆ, ಆಸ್ಟ್ರೇಲಿಯಾ,ಮಲಯಾಸ್ಯಾ, ಸ್ಂಗಾಪೂರ್ ಜನರು ಏಪ್ರಿಲ್ ೮ ರಂದು ಆಚರಿಸುತ್ತಾರೆ.
ಇದನ್ನ ಬೆಳಿಗ್ಗೆ ಎದ್ದು ಎಣ್ಣೇ ಸ್ನಾನದಿಂದ ಶುರುವಾಗುತ್ತದೆ.  ಮನೆ ಮುಂದೆ ನೇರನ್ನ ಹಾಕಿ ಹಳ್ಳೀಯಲ್ಲಿ ಗೋಮಯದಿಂದ ಶುಧ್ಧಿಯನ್ನ ಮಾಡುತ್ತಾರೆ. ಹಾಗೆ ಮಾಡಿದ ಮೇಲೆ, ರಂಗೋಲಿಯನ್ನ ಹಾಕುತ್ತಾರೆ. ಮನೆಯ ಬಾಗಿಲನ್ನ ತೋರಣಗಳಿಂದ ಅಲಂಕರಿಸುತ್ತಾರೆ. ಈ ತೋರಣಗಳಿಗೆ ಮಾವಿನ ಎಲೆ ಹಾಗೂ ಬೇವಿನ ಎಲೆಯನ್ನ ಉಪಯೋಗಿಸುತ್ತಾರೆ. ಅದೇ ಕರ್ನಾಟಕದಲ್ಲಿ ಬೇವು ಬೆಲ್ಲವನ್ನ ತಿಂದು ಒಳ್ಳೇ ಮಾತನ್ನ ಆಡಪ್ಪಾ ಅನ್ನುತ್ತಾರೆ. ಅದೇ ತೆಲುಗು ಪ್ರದೇಶದಲ್ಲಿ ಉಗಾದಿ ಪಚಡಿಯನ್ನ ತಯ್ಯಾರು ಮಾಡುತ್ತಾರೆ.
ಬ್ರಾಹ್ಮಣ ಅಥವಾ ಪೂರೋಹಿತರನ್ನ ಕರೆಸಿ ಪಂಚಾಂಗ ಶ್ರವಣವನ್ನ ಓದಿಸುತ್ತಾರೆ. ಅದರಲ್ಲಿ ಮುಖ್ಯವಾಗಿ ಯಾವ ರಾಶಿಗೆ ಎಸ್ಟು ಲಾಭ ಹಾಗೂ ಎಸ್ಟು ನಸ್ಟ ಅಂತ ಹೇಳುತ್ತಾರೆ. ಹಾಗೂ ಹೊಸವರ್ಷದ ಫಲಗಳನ್ನ ಹೇಳಿಸುತ್ತಾರೆ. ಇದನ್ನ ಎಲ್ಲಾ ವರ್ಗದ ಜನರೂ, ಆಫ಼ೀಸು ಹಾಗೂ ದೇವಸ್ಥಾನಗಳಲ್ಲಿ ಹಾಗೂ ಸಾಮಾಜಿಕ ಸಂಸ್ಥೆಗಳಲ್ಲಿ ತಪ್ಪದೆಯೇ ಆಚರಿಸುತ್ತಾರೆ.
ಉಗಾದಿ ಪಚಡಿಯಲ್ಲಿ ಆರು ತರಹದ ವಸ್ತುಗಳು ಇರುತ್ತವೆ. ಅವುಗಳು ಯಾವುದೆಂದರೆ, ೧.ಬೆಲ್ಲ, ೨. ಕಚ್ಚಾ ಮಾವು ೩. ಬೇವಿನ ಹೂ ೪. ಉಪ್ಪು ೫. ಕೆಂಪು ಮೆಣಸಿನ ಕಾಯಿ (ಬ್ಯಾಡಗೀ ಅಥವಾ ಗುಂಟೂರು ಮಿರ್ಚಿ) ಮತ್ತು ಹುಣಿಸೇ ಹಣ್ಣು.  ಇದನ್ನ ತಿಂದರೆ ಜೀವನದಲ್ಲಿ ಕಹಿಯಿಂದ ಸಿಹಿಯವರೆಗೆ ಅನುಭವವಾಗಬೇಕು ಅನ್ನುವ ಅರ್ಥದಲ್ಲಿ ಜನರು ಇದನ್ನ ಬಹಳ ಮಜಾದಿಂದ ಸವಿಯುತ್ತಾರೆ.
ನಮ್ಮಲ್ಲಿ ಏನು ಮಾಡ್ತಾರೆಂದರೆ, ಬೆಲ್ಲದ ಜೊತೆಯಲ್ಲಿ ಬೇವಿನ ಚಿಗರು ಎಲೆ ಹಾಗೂ ಹೂವನ್ನ ಮಿಕ್ಸ್ ಮಾಡಿ ಎಲ್ಲರಿಗೂ ಹಂಚುತ್ತಾರೆ.
ಅದೇ ಮಹಾರಾಸ್ಟ್ರದಲ್ಲಿ ಹಾಗೂ ಗೋವಾದಲ್ಲಿ ಕೂಡಾ ಇದನ್ನ ಗುಡಿ ಪಡ್ವಾ ಅನ್ನುತ್ತಾರೆ.
ಕಾಶ್ಮೀರ ಪಂಡಿತರು ಇದನ್ನ ನವ್ರೇಹ ಹಬ್ಬವೆಂದು ಆಚರಿಸುತ್ತಾರೆ. ಇದು ಸಂಸ್ಕೃತ ಶಬ್ದ. ನವ್ರೇಹ ಅಂದರೆ ನವ ವರ್ಷ. ಹಿಂದಿನ ದಿನ ಈ ಪಂಡಿತರು ಒಂದು ಹರಿವಾಣದಲ್ಲಿ ಪಂಚಾಂಗ, ಉಪ್ಪು, ಸಕ್ರೆ ಕೇಂಡಿ, ಬೆಳ್ಳೀ ನಾಣ್ಯ, ಕನ್ನಡಿ, ಬಾದಾಮ್, ಹೂ, ಬ್ರೆಡ್, ಬೆಳ್ತಿಗೆ ಅಕ್ಕಿ, ಮೊಸರು ಗಳನ್ನ ಇಡ್ತಾರೆ. ನವ್ರೇಹದ ದಿನ ಬೆಳಿಗ್ಗೆ ಪ್ರಪ್ರಥಮವಾಗಿ ಎಲ್ಲರೂ ಎದ್ದವರು ಈ ಹರಿವಾಣವನ್ನ ನೋಡಬೇಕು. ಆವಾಗಲೇ ಆ ವರ್ಷವಿಡೀ ಬಹಾಳ ಒಳ್ಳೆಯದಾಗುತ್ತದೆಂಬ ನಂಬಿಕೆ.
ಈಗ ಯಾವ ಯಾವ ರಾಶಿಯವರಿಗೆ ಯಾವ ಫಲಗಳು ಸಿಗುತ್ತವೆ ಎಂದು ನೋಡೋಣ. ಇದಕ್ಕಾಗಿ ನಮಗೆ ಗ್ರಹಗಳು ಯಾವ ಯಾವ ಮನೆಯಲ್ಲಿರುತ್ತಾರೆಂದು ತಿಳಿಯುವುದು ಅಗತ್ಯ.
ತಾರೀಕು ೭/೦೪/೨೦೧೬ರ ರಾತ್ರಿ ೨ ಗಂಟೆ ೨೨ ನಿಮಿಷಗಳ ವರೆಗೆ ಚಂದ್ರನು ರೇವತೀ ನಕ್ಷತ್ರದಲ್ಲಿದ್ದು ಮೀನ ರಾಶಿಯಲ್ಲಿರುತ್ತಾನೆ. ಆಮೇಲೆ, ಚಂದ್ರನು ಅಶ್ವಿನಿ ನಕ್ಷತ್ರಕ್ಕೆ ಬರುತ್ತಾನೆ. ಅಂದರೆ ಮೇಷ ರಾಶಿಗೆ ಬರುತ್ತಾನೆ.  ಅದೇ ಸೂರ್ಯನು ಮೀನದಲ್ಲಿಯೇ ಇರುತ್ತಾನೆ. ಈತನು ಬದಲಾಗುವುದು, ಏಪ್ರಿಲ್ ೧೩ ರಂದು. ಅಂದರೆ ಂಏಷ ಸಂಕ್ರಮಣದಂದು. ಅದೇ ಮೀನ ರಾಶಿಯಲ್ಲಿ ಶುಕ್ರನೂ ಇರುತ್ತಾನೆ.
ಬುಧನು ಮೇಷ ದಲ್ಲಿದ್ದರೆ, ಗುರು ಮತ್ತು ರಾಹು ಗ್ರಹಗಳು ಸಿಂಹದಲ್ಲಿರುತ್ತಾರೆ. ಅದೇ ಶನಿ ಮತ್ತು ಕುಜ ಗ್ರಹಗಳು ವೃಸ್ಚಿಕ ರಾಶಿಯಲ್ಲಿರುತ್ತಾರೆ. ಇನ್ನು ಕೇತು ಗ್ರಹವು ಕುಂಭದಲ್ಲಿರುತ್ತಾರೆ.
ಈಗ ಸೂರ್ಯೋದಯವು ಬೆಂಗಳೂರಿನಲ್ಲಿ ಬೆಳಿಗ್ಗೆ ೬ ಗಂಟೆ ೧೦ ನಿಮಿಷಕ್ಕೆ ಆದಿನದಂದು ಆಗುತ್ತದೆ. ಹಾಗಾದರೆ ನಮ್ಮ ಅಂದಿನ ಲಗ್ನವು  ಮೀನವೇ ಆಗಿರುತ್ತದೆ.
ಇನ್ನು ಸಾಮಾನ್ಯ ವಿಷಯಗಳ ಬಗ್ಗೆ ನಿಮಗೆ ಗಮನವಿರಲೇ ಬೇಕು.
ಗೋಚಾರದಲ್ಲಿ ಈ ಕೆಳಗಿನ ಗ್ರಹಗಳು ಉತ್ತಮವಾದ ಶುಭ ಫಲಗಳನ್ನೇ ಕೊಡುವವರು. ಆದರೆ ಅವುಗಳು ನಿಮ್ಮ ನಿಮ್ಮ ರಾಶಿಯಿಂದ ಈ ಕೆಳಗಿನ ಮನೆಗಳಲ್ಲಿಯೇ ಇರಬೇಕು:-
1.      ರವಿ                             :- ೩,೬, ೧೦ ಮತ್ತು ೧೧
2.      ಚಂದ್ರ                         :- ೧,೨,೩,೪,೫,೬,೭,೯,೧೦ ಮತ್ತು ೧೧
3.      ಮಂಗಲ್                    :- ೩,೬, ಮತ್ತು ೧೧
4.      ಬುಧ                           :- ೨,೪,೬,೮,೧೦ ಮತ್ತು ೧೧
5.      ಗುರು                           :- ೨,೫,೭,೯ ಮತ್ತು ೧೧
6.      ಶುಕ್ರ                            :- ೧,೨,೩,೪,೫,೮,೯,೧೧ ಮತ್ತು ೧೨.
7.      ಶನಿ                              :- ೩,೬, ಮತ್ತು ೧೧
8.      ರಾಹು-ಕೇತು  :- ೩, ೬, ಮತ್ತು ೧೧.
ಈಗ ಉದಾಹರಣೆಗಾಗಿ ಮೇಷ ರಾಶಿಯವರಿಗೆ ಗುರು ಗೋಚಾರದಲ್ಲಿ ಯಾವ ಫಲಗಳನ್ನ ಕೊಡುವನು? ಈಗ ನೀವೇ ನೋಡಿ ಗುರು ಗೋಚಾರದಲ್ಲಿ ರಾಶಿಯಿಂದ ೨,೫,೭,೯ ಮತ್ತು ೧೧ ರಲ್ಲಿ ಉತ್ತಮ ಫಲಗಳನ್ನೇ ಕೊಡುತ್ತಾನೆ. ಅಂದರೆ ಈ ವರ್ಷ ಮೇಷ ರಾಶಿಯವರಿಗೆ  ಗುರು ಗ್ರಹವು ರಾಶಿಯಿಂದ ಅಂದರೆ ಮೇಷದಿಂದ ೫ ಅಂದರೆ ಸಿಂಹದಲ್ಲಿ ಪ್ರಥಮಾರ್ಧದಲ್ಲಿರುತ್ತಾನೆ. ಅಂದರೆ ಇವರುಗಳಿಗೆ ಪ್ರಥಮಾರ್ಧದಲ್ಲಿ ಅತೀ ಉತ್ತಮ ಫಲಗಳು ಸಿಗುವವು. ಪಂಚಮ ಸ್ಥಾನ ಪುತ್ರ ಸ್ಥಾನವಾದುದರಿಂದ ಪುತ್ರರಿಂದ ಲಾಭ. ಪಂಚಮ ಸ್ಥಾನ ಲವ್ ಏಂಡ್ ರೋಮೆನ್ಸಿನ ಮನೆಯಾದ ಕಾರಣ, ಇವರದ್ದು ಲವ್ ಏಂಡ್ ರೋಮೇನ್ಸ್ ಮಾತ್ರ ಫೇವಿಕಾಲ್ ಹಾಕಿದ ಹಾಗೆ. ಪಂಚಮ ಸ್ಥಾನ ಹೈಯರ್ ಎಜುಕೇಷನ್ನಿನ ಸ್ಥಾನವಾದ ಕಾರಣ, ಇವರುಗಳು ವಿಧ್ಯಾಭ್ಯಾಸದಲ್ಲಿ ಉನ್ನತ ಶಿಕ್ಷಣವನ್ನ ಖಂಡಿತ ಮಾಡುತ್ತಾರೆ. ಹೀಗೆ ಫಲಗಳನ್ನ ಹೇಳಬೇಕು. ಇನ್ನು ಈ ಪಂಚಮ ಸ್ಥಾನ ಅಂದರೆ ಗುರು ಸಿಂಹದಲ್ಲಿದ್ದುಕೊಂಡು ತನ್ನ ೫ ನೇ ದೃಸ್ಟಿಯನ್ನ ತನ್ನ ಮನೆಯೇ ಆದ ಧನೂರ್ ರಾಶಿಗೆ ಹಾಕುವನು. ೭ ನೇ ದೃಸ್ಟಿಯನ್ನ ಕುಂಭ ರಾಶಿಗೆ ಹಾಕುವನು. ಹಾಗೆಯೇ ೯ ನೇ ಮನೆಯ ದೃಸ್ಟಿಯನ್ನ ಮೇಷ ರಾಶಿಗೇ ಹಾಕುವನು. ಅಂದರೆ ಈ ಮನೆಗಳ ಕಾರಕತ್ವಗಳನ್ನೆಲ್ಲಾ ಆತನು ಒಳ್ಳೆಯದನ್ನೇ ಮಾಡುವನು. ಅಂದರೆ ಮೇಷ ರಾಶಿಯವರಿಗೆ ಈ ಮನೆಗಳು ಕ್ರಮವಾಗಿ ಭಾಗ್ಯ, ಲಾಭ ಹಾಗೂ ತನು ಭಾವ ವಾಗಿರುತ್ತೆ. ಅಂದರೆ ಇವರ ಭಾಗ್ಯದಲ್ಲಿ ಹೆಚ್ಚಳ. ತಂದೆಯರೊಡನೆ ಉತ್ತಮ ಸಂಬಂಧ. ಲಾಭದಲ್ಲಿ ಹೆಚ್ಚಳ ಹಾಗೂ ತಮ್ಮ ಸ್ವಂತಿಕೆಯ ಜೀವನದಲ್ಲಿ ಒಂದು ರೀತಿಯ ಗೌರವ ಸಮಾಜದಲ್ಲಿ ಸಿಗುತ್ತದೆ ಅಂತ ಅರ್ಥ. ಇದೇ ರೀತಿ ನೀವುಗಳು ಇತರ ರಾಶಿಯವರಿಗೂ ಎಪ್ಪ್ಲೈ ಮಾಡಬೇಕು.
ಅದೇ ೧೧/೦೮/೨೦೧೬ ರ ನಂತರ ಇವರಿಗೆ ಗುರು ಗ್ರಹವು ೬ ನೇ ಮನೆ ಅಂದರೆ ಕನ್ಯಾ ರಾಶಿಯಲ್ಲಿರುವನು. ಈ ಮನೆ ನಮ್ಮ ಗೋಚಾರದಲ್ಲಿಲ್ಲ. ಅಂದರೆ ಇವರುಗಳ ಆರೋಗ್ಯದಲ್ಲಿ ನಸ್ಟ. ಡಯಾಬಿಟೀಸ್ ಇದ್ದರೆ ಕಂಟೋಲ್ ಮಾಡಿ ಎನ್ನುವ ಎಚ್ಚರಿಕೆಯನ್ನ ನೀಡಬಹುದು.
ಈ ಗುರು ಗ್ರಹದ ವಿಶೇಷವೇನೆಂದರೆ, ತಾನಿದ್ದ ಮನೆಯನ್ನ ಹಾಳು ಮಾಡಿ, ತಾನು ದೃಸ್ಟಿಸಿದ ಮನೆಯನ್ನ ಒಳ್ಳೆಯದನ್ನ ಮಾಡುತ್ತಾನೆ.
ಅದೇ ಶನಿ ಗ್ರಹ, ತಾನಿದ್ದ ಮನೆಯನ್ನ ಒಳ್ಳೆಯದನ್ನ ಮಾಡಿ, ತಾನು ದೃಸ್ಟಿಸಿದ ಮನೆಯನ್ನ ಹಾಳು ಮಾಡುತ್ತಾನೆ. ಶನಿಗೆ ೩, ೭ ಮತ್ತು ೧೦ ನೇ ದೃಸ್ಟಿ ಇರುತ್ತೆ. ಶನಿಯ ವಕ್ರಿ ದೃಸ್ಟಿ ಅಜನನ್ನ ರಂಕ್ನನ್ನಾಗಿ, ರಂಕನನ್ನ ರಾಜನನ್ನಾಗಿ ಮಾಡುತ್ತಾನೆ. ಯಾರಿಗೆ ಅಹಂಕಾರವಿದೆಯೋ ಅದನ್ನ ಮುರಿಯುತ್ತಾನೆ. ಶನಿಯು ನ್ಯಾಯಾಧೀಷ. ಅವನ ಕೆಲಸವೇ ನ್ಯಾಯವನ್ನ ಕೊಡಿಸುವುದು.
ಉಗಾದಿ ಭವಿಷ್ಯ ೨೦೧೬ (೦೮-೦೪-೨೦೧೬) ಚೈತ್ರ ಶುಕ್ಲ ಪ್ರತಿಪತ್ ತಿಥಿ.
ಈಗ ಮೇಷ ರಾಶಿಯವರಿಗೆ ೨೦೧೬ ಉಗಾದಿ ಫಲ ಹೇಗಿದೆ ಎಂದು ನೋಡೋಣ :-
ದುರ್ಮುಖಿ ನಾಮ ಸಂವತ್ಸರದ ಶುರುವಾತೇ ಏಪ್ರಿಲ್ ೮, ೨೦೧೬ ಚೈತ್ರ ಶುಕ್ಲ ಪಾಡ್ಯ ತಿಥಿಯಂದು. ಇದು ಮುಂದಿನ ವರ್ಷ, ಅಂದರೆ ಮಾರ್ಚ್ ೨೭, ೨೦೧೭ ರ ವರೆಗೆ ಇರುತ್ತದೆ.
ಪಾಸ್ಚಿಮಾತ್ಯದ ರೀತ್ಯ, ಸೂರ್ಯ ಸಿಧಾಂತದ ಪ್ರಕಾರ ಮಾರ್ಚ್ ೨೧ ರಿಂದ ಏಪ್ರಿಲ್ ೨೦ ರಂದು ಹುಟ್ಟಿದಂತಹ ವ್ಯಕ್ತಿಗಳಿಗೆಲ್ಲಾ ಮೇಷ ರಾಶಿ ಬರುತ್ತೆ.
ಅದೇ ವೇದಿಕ್ ಆಸ್ಟ್ರೋಲಜಿಯ ಪ್ರಕಾರ, ಚಂದ್ರ ಸಿಧ್ಧಾಂತದ ರೀತ್ಯ, ಮಾನವನು ಜನ್ಮವೆತ್ತಿದಾವಾಗ ಚಂದ್ರನು, ಮೇಷ ರಾಶಿಯಲ್ಲಿದ್ದರೆ, ಅವರುಗಳು ಮೇಷ ರಾಶಿಯವರಾಗುತ್ತಾರೆ.
ಮೇಷ ರಾಶಿಯವರಿಗೆ ಗುರು ಗ್ರಹವು ೫ ಮತ್ತು ೬ ನೇ ಮನೆಯಲ್ಲಿರುತ್ತಾನೆ ಈ ವರ್ಷ ಪೂರ್ತಿ.
ಅದೇ ಶನಿ ಮಹಾರಾಜನು ೮ ಮತ್ತು ೯ ನೇ ಮನೆಯಲ್ಲಿರುತ್ತಾನೆ.
ಇನ್ನು ರಾಹು ಕೇತುಗಳು ೫ ಮತ್ತು ೧೧ನೇ ಮನೆಯಲ್ಲಿ ಹಾಗೂ ನಂತರ ಕೆಲವು ದಿನಗಳಲ್ಲಿ, ೪ ಮತ್ತು ೧೦ ನೇ ಮನೆಯಲ್ಲಿರುತ್ತಾರೆ.

ನಿಮ್ಮ ಸಂಸಾರದ ಸದಸ್ಯರುಗಳಿಗೆ ಸಾಮಾನ್ಯ ಭವಿಷ್ಯ
1.       ನಿಮ್ಮ ಜೀವನದಲ್ಲಿ ಬಹಳ ಉತಲ್ ಪತಲ್ ಇರುತ್ತದೆ ಕಾರಣ ೨೦೧೬-೧೭ ರಂದು , ಗುರು ನಿಮ್ಮ ರಾಶಿಯಿಂದ  ೫ ಮತ್ತು ೬ರಲ್ಲಿರುತ್ತವೆ . ಅದೇ ಶನಿ ಗ್ರಹವು ನಿಮ್ಮ ರಾಶಿಯಿಂದ ೮ ಮತ್ತು ೯ ನೇ ಮನೆಯಲ್ಲಿರುತ್ತವೆ. ಕಾರಣ ಈ ಉಗಾದಿ ಫಲವು ಏಪ್ರಿಲ್ ೮ ರಿಂದ ಮುಂದಿನ ವರುಷ ೨೦೧೭  ಮಾರ್ಚ್ ತಿಂಗಳು ೨೭ ರ ವರೆಗಿರುತ್ತದೆ.
2.       ನಿಮ್ಮ ಪತ್ನಿಯೊಡನೆ ಸಂಬಂಧವನ್ನ  ಉಳಿಸಿಕೊಳ್ಳಲು  ಬಹಳಸ್ಟು  ಕಸ್ಟಪಡಬೇಕಾದೀತು. ಕಾರಣ ಅವರು ನಿಮ್ಮ ಮಾತನ್ನ ಕೇಳುವ ಪರಿಸ್ಥಿತಿಯಲ್ಲಿಯೇ ಇರಲಾರರು. ಒಂದು ವೇಳೆ ನೀವುಗಳು ಅಕ್ಕ ಪಕ್ಕದ ರಾಶಿಯವರು ಆಗಿದ್ದಲ್ಲಿ, ನಿಮಗೆ ಅಸ್ಟಮ ಶನಿಯು ಅಂತ್ಯವಿದ್ದಲ್ಲಿ, ಅವರುಗಳಿಗೆ ಅಸ್ಟಮ ಶನಿಯ ಕಾಟ ಶುರು!
3.       ನಿಮ್ಮ ತಾಯಿಯೊಡನೆ ಇರುವ ಸಂಬಂಧವು ಚಂದ್ರನು ಸಿಂಹವೃಸ್ಚಿಕ ಹಾಗೂ ಕುಂಭದಲ್ಲಿರುವಾಗ ಕೆಡಬಹುದು.
4.       ನಿಮ್ಮ ಮಕ್ಕಳ ಆರೋಗ್ಯದಬಗ್ಗೆ ಕಾಳಜಿಯನ್ನ ವಹಿಸಿ. ಮನೆಯಲ್ಲಿರುವ ಹಿರಿಯವರ ಆರೋಗ್ಯವೂ  ಹದಗೆಡುವ ಸಂದರ್ಭ ಉಂಟು.
5.       ನೀವುಗಳು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿಯನ್ನ ಕೊಡುವುದುಂಟು.
ನಿಮ್ಮ ಕಾರ್ಯಕ್ಷೇತ್ರದಲ್ಲಿ
1.       ಈ ವರ್ಷ ಬಿಸಿನೆಸ್ಸಿನಲ್ಲಿರುವವರಿಗೆ ಬಹಳ ಒಳ್ಳೆಯದುಂಟು. ಆದ್ದರಿಂದ ಹೊಸ ಪ್ರೊಜೆಕ್ಟ್ಸಗಳಿಗೆ ಇದೇ ಸಮಯ ಬಹಳ ಒಳ್ಳೆಯದು.
2.       ನೀವುಗಳು ಒಂದನ್ನ ಮಾತ್ರ ಮರೆಯಬೇಡಿ. ನಿಮ್ಮ ಕೆಳಗಡೆ ಕೆಲಸ ಮಾಡುವಂತಹ ಕೆಲಸಗಾರರೊಂದಿಗೆ ಒಳ್ಳೆಯ ಸಂಬಂಧವನ್ನ ಇಟ್ಟುಕೊಳ್ಳಿ.
3.       ಈ ವರುಷ ನಿಮ್ಮ ವರುಷವಾಗಿರುತ್ತೆ. ನಿಮ್ಮಲ್ಲಿ ಕ್ರಿಯೇಟಿವಿಟಿ ಹಾಗೂ ಹೊಸ ಹೊಸ ಜನರೊಂದಿಗೆ ಮಾಡುವಂತಹ ಸಂಬಂಧ ಆಸ್ಚರ್ಯವನ್ನ ಉಂಟು ಮಾಡುತ್ತದೆ.
4.       ಒಂದು ವೇಳೆ ಎಂಪ್ಲೋಯಿಮೆಂಟ್ಸ್ ಕ್ಶೇತ್ರದಲ್ಲಿರುವವರೆಗೆ ಬಹಳ ಒಳ್ಳೆಯ ಸಮಯ. ಇದೇ ಒಳ್ಳೆಯ ಸಮಯ ನಿಮಗೆ ಹೊಸ ಕೆಲಸವನ್ನ ಹುಡುಕಲು.
ವಿದ್ಯಾ ಕ್ಷೇತ್ರದಲ್ಲಿ
1.       ನೀವು ಕಠಿಣ ರೀತಿಯಲ್ಲಿ ಈ ವರುಷ ಕೆಲಸವನ್ನ ಮಾಡಿದರೆ ಮಾತ್ರ ನಿಮಗೆ ಜಯ ಸಿಗುತ್ತೆ.
2.      ಯಾವುದೇ ರೀತಿಯಲ್ಲಿ ನಿಮ್ಮ ಗಮನ ಅಲ್ಲಿ ಇಲ್ಲಿ ಹರಿದಾಡಬಾರದು. ಹಾಗೆ ಹೋದಲ್ಲಿ ಕೆಟ್ಟಿರಿ, ಜೋಕೆ!
ಫ಼ೈನೇನ್ಸ್ ಕ್ಷೇತ್ರದಲ್ಲಿ
1.       ಹಿಂದಿನ ವರ್ಷ ಮಾಡಿರುವಂತಹ ಇನ್ವೆಸ್ಟ್ಮೆಂಟ್ಸ್ ನಿಮಗೆ ದುಗುಣವಾಗುವ ಸಂದರ್ಭ.
2.       ಆದರೆ ನಿಮ್ಮ ಖರ್ಚನ್ನ ಮಾತ್ರ ಹದ್ದಿನಲ್ಲಿಡಬೇಕು.
ಪ್ರೇಮ ಕ್ಷೇತ್ರದಲ್ಲಿ
1.       ಈ ವರ್ಷ ನಿಮಗೆ ಆಗಸ್ಟ್ ೧೧ ರವರೆಗೆ ಮದುವೆ ಯೋಗವುಂಟು.
2.       ಮದುವೆ ಆದ ಜನರಿಗೆ ಇದು ರೋಮೇನ್ಸ್ ಮಾಡುವಂತಹ ಒಳ್ಳೆಯ ಸಮಯ.
3.       ಈ ವರ್ಷ ಸಣ್ಣ ತರದಲ್ಲಿ ರೋಮೇನ್ಸ್ ಕೆಡುವ ಸಂದರ್ಭವಿದ್ದರೂ, ನಿಮ್ಮಲ್ಲಿ ಅದನ್ನ ಸರಿ ಮಾಡುವ ಶಕ್ತಿ ನಿಮಗುಂಟು.
ಎಚ್ಚರಿಕೆ
1.       ಏಪ್ರಿಲ್ ತಿಂಗಳಿಂದ ಆಗಸ್ಟ್ ೧೧ ರ ವರೆಗೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿಯಿರಲಿ.
2.       ಹೊಸ ಪ್ರೊಜೆಕ್ಟ್ಸಗಳನ್ನ ಈ ಪೀರಿಯಡನ ನಂತರವೇ ಮಾಡಿ.
ತಿಂಗಳ ಭವಿಷ್ಯ
1.       ಏಪ್ರಿಲ್                        ನಿಮ್ಮ ಲವ್ ಲಫ಼್  ಮತ್ತು ನಿಮ್ಮ ವೃತ್ತಿಯನ್ನ ಹದದಲ್ಲಿಡಿ.
2.       ಮೇ                  ನಿಮ್ಮ ಸಂಸಾರದೊಡನೆ ಆನಂದ ಪಡುವಂತಹ ಸಮಯ.
3.       ಜೂನ್             ಮುಂದೆ ಬರುವ ಚಲ್ಲೇಂಜಸನ್ನ ಎದಿರಿಸಲು ಪ್ಲೇನ್ ಮಾಡಿ.
4.       ಜುಲೈ               ಬುಧನ ಸಹಾಯದಿಂದಾಗಿ ಎಲ್ಲಾ ರೀತಿಯಲ್ಲೂ ಮುನ್ನೆಡೆ.
5.       ಆಗಸ್ಟ್              ಈ ತಿಂಗಳು ಬೆಸ್ಟ್, ನಿಮ್ಮ ಲವ ಮತ್ತು ರೋಮೇನ್ಸ್ ಲೈಫ಼್ಗೆ.
6.       ಸಪ್ಟೆಂಬರ್      ಈ ತಿಂಗಳು ನಿಮ್ಮ ಆರೋಗ್ಯಕ್ಕೆ ಕುತ್ತು ಹಾಗೂ ಸಂಸಾರದೊಡನೆ ವಿರಸ.
7.       ಆಕ್ಟೋಬರ್     ಈ ತಿಂಗಳು ನಿಮ್ಮ ಬಿಸಿನೆಸ್ಸಿಗೆ ಹಾಗೂ ಕೇರಿಯರ್ಗೆ ಉತ್ತಮ ಸಮಯ.
8.       ನವೆಂಬರ್       ಈ ತಿಂಗಳು ಆರಾಮವಾಗಿರಲು ಬೆಸ್ಟ್.
9.       ಡಿಸೆಂಬರ್       ಈ ತಿಂಗಳೂ ನಿಮಗೆ ಬಹಳ ಉತ್ತಮ. ಆರಾಮದಿಂದ ಇರಿ.
ಪರಿಹಾರ
1.       ನಿಮ್ಮ ಹಣೆಯಲ್ಲಿ ಕೇಸರೀ ತಿಲಕ್ ಇರಲಿ.
2.       ದಿನಕ್ಕೆ ಎರಡು ಬಾರಿ ಹನುಮಾನ್ ಚಾಲೀಸ ಓದಿ.
3.       ನಿಮ್ಮ ಸುತ್ತ ಮುತ್ತ ಶುಚಿಯಾಗಿಡಿ. ಇದು ನಿಮಗೆ +ವ್ ಎನರ್ಜೀ ಸಿಗುತ್ತೆ.
ಉಗಾದಿ ಭವಿಷ್ಯ ೨೦೧೬ (೦೮-೦೪-೨೦೧೬) ಚೈತ್ರ ಶುಕ್ಲ ಪ್ರತಿಪತ್ ತಿಥಿ.
ಈಗ ವೃಷಭ ರಾಶಿಯವರಿಗೆ ೨೦೧೬ ಉಗಾದಿ ಫಲ ಹೇಗಿದೆ ಎಂದು ನೋಡೋಣ :-
ದುರ್ಮುಖಿ ನಾಮ ಸಂವತ್ಸರದ ಶುರುವಾತೇ ಏಪ್ರಿಲ್ ೮, ೨೦೧೬ ಚೈತ್ರ ಶುಕ್ಲ ಪಾಡ್ಯ ತಿಥಿಯಂದು. ಇದು ಮುಂದಿನ ವರ್ಷ ಅಂದರೆ ಮಾರ್ಚ್ ೨೭, ೨೦೧೭ ರ ವರೆಗೆ ಇರುತ್ತದೆ.
ಪಾಸ್ಚಿಮಾತ್ಯದ ರೀತ್ಯ, ಸೂರ್ಯ ಸಿಧಾಂತದ ಪ್ರಕಾರ ಏಪ್ರಿಲ್ ೨೧ ರಿಂದ ಮೇ ೨೦ ರಂದು ಹುಟ್ಟಿದಂತಹ ವ್ಯಕ್ತಿಗಳಿಗೆಲ್ಲಾ ವೃಷಭ ರಾಶಿ ಬರುತ್ತೆ.
ಅದೇ ವೇದಿಕ್ ಆಸ್ಟ್ರೋಲಜಿಯ ಪ್ರಕಾರ, ಚಂದ್ರ ಸಿಧ್ಧಾಂತದ ರೀತ್ಯ, ಮಾನವನು ಜನ್ಮವನ್ನ ಎತ್ತಿದಾವಾಗ ಚಂದ್ರನು,  ವೃಷಭ ರಾಶಿಯಲ್ಲಿದ್ದರೆ, ಅವರುಗಳು ವೃಷಭ ರಾಶಿಯವರಾಗುತ್ತಾರೆ.
ವೃಷಭ ರಾಶಿಯವರಿಗೆ ಈ ವರ್ಷ ಪೂರ್ತಿ ಗುರು ಗ್ರಹವು ೪ ಮತ್ತು ೫ ನೇ ಮನೆಯಲ್ಲಿರುತ್ತಾನೆ.
ಅದೇ ಶನಿ ಮಹಾರಾಜನು ೭ ಮತ್ತು ೮ ನೇ ಮನೆಯಲ್ಲಿರುತ್ತಾನೆ.
ಇನ್ನು ರಾಹು ಕೇತುಗಳು ೪ ಮತ್ತು ೧೦ನೇ ಮನೆಯಲ್ಲಿ ಹಾಗೂ ನಂತರ ಕೆಲವು ದಿನಗಳಲ್ಲಿ, ೩ ಮತ್ತು ೯ ನೇ ಮನೆಯಲ್ಲಿರುತ್ತಾರೆ.


ಸಂಸಾರದ ಸದಸ್ಯರುಗಳಿಗೆ ಸಾಮಾನ್ಯ ಭವಿಷ್ಯ
1.      ನಿಮ್ಮ ಸಂಸಾರದ ಸದಸ್ಯರುಗಳಿಂದ ಸಲಹೆಗಳನ್ನ ಪಡೆಯಿರಿ.
2.      ಇದರಿಂದಾಗಿ ನಿಮ್ಮ ಲವ್ ಮತ್ತುರೋಮೇನ್ಸ್ ಜೀವನ ಹೆಚ್ಚುತ್ತದೆ.
3.      ೭ನೇ ಮನೆಯಲ್ಲಿರುವ ಶನಿಯು ನಿಮ್ಮ ಕಳತ್ರರ ಜೊತೆಗೆ ಸಂಬಂಧವನ್ನ ಕೆಡಿಸಬಹುದು.
4.      ನಿಮ್ಮ ತಂದೆಯೊಡನೆ ಸಂಬಂಧ ಅತೀ ಉತ್ತಮ. ಇನ್ನೇನು ಬೇಕು ಹೇಳಿ.
5.      ಆದರೆ ನಿಮ್ಮ ತಾಯಿಯೊಡನೆ  ಇರುವಂತಹ ಸಂಬಂಧಕ್ಕೆ ಹೆಚ್ಚಿಗೆ ಕೆಲಸವನ್ನ ಮಾಡಬೇಕು. ಹೇಗಿದ್ದರೂ ರಾಹು ೪ನೇ ಮನೆಯಲ್ಲಿಯೇ ಇರುತ್ತಾನೆ. ಆತ ಖಂಡಿತ ಈ ಸಂಬಂಧಕ್ಕೆ ಧಕ್ಕೆಯನ್ನ ಒದಗಿಸದೇ ಬಿಡಲಾರ.
ನಿಮ್ಮ ಕೇರೀಯರ್ ಬಗ್ಗೆ
1.      ಈ ವರ್ಷ ಬಿಸಿನೆಸ್ನಲ್ಲಿರುವವರಿಗೆ ಉತ್ತಮ ಸಮಯ.
2.      ಹೊಸ ಪ್ರೊಜೆಕ್ಟ್ಸಗಳು ಹಾಗೂ ಹೊಸ ಪ್ರೊಡಕ್ಟ್ಸ್ ಬರಬಹುದು.
3.      ನಿಮ್ಮ ಮಾತುಗಳ ಮೇಲೆ ಹತೋಟೆಯನ್ನಿಡಿ. ಮೊದಲೇ ಗಳ ಗಳ ಅಂತ ಬೇಕಿದ್ದದ್ದನ್ನ, ಬ್ಯಾಡದೇ ಇದ್ದನ್ನ ಹೇಳುವ ಚಟವಿರುವವರು.
4.      ನಿಮ್ಮ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಸ್ವಲ್ಪ ಹೆಚ್ಚಿಗೆ ಕೆಲಸವನ್ನ ಮಾಡಿ.
5.      ಹಳೆಯದನ್ನ ಮರೆತು ಬಿಟ್ಟು ಹೊಸದನ್ನ ಸೆಳೆಯಲು ಯೋಚಿಸಿ.
6.      ಜೋಬಿನಲ್ಲಿರುವವರಿಗೆ ಪ್ರಮೋಷನ್ ಗ್ಯಾರಂಟಿ. ಇಲ್ಲಾ ಸಂಬಳ ಹೆಚ್ಚಾದೀತು.
ನಿಮ್ಮ ವಿದ್ಯಾ ಕ್ಷೇತ್ರದಲ್ಲಿ
1.      ನಿಮ್ಮ ಓದುವಿನಲ್ಲಿ ನಿಮ್ಮ ಗಮನವಿರಲಿ.
2.      ನಿಮ್ಮ ಸಂಸಾರದ ವಿಷಯವಾಗಿ ನಿಮ್ಮ ಗಮನಕ್ಕೆ ಧಕ್ಕೆ ಆಗುವಸಂಧರ್ಭ.
3.      ಹೈಯರ್ ವಿದ್ಯಾಭಾಸಕ್ಕೆ ಇಟ್ಟಿರುವಂತಹ ಗುರಿಗೆ ಧಕ್ಕೆ ಆಗುವ ಸಾಧ್ಯತೆ ಹೆಚ್ಚು.
4.      ಇದರಿಂದಾಗಿ ನಿಮಗೆ ಕಠಿಣ ಶ್ರಮವನ್ನ ಪಡಬೇಕಾಗಿ ಬರಬಹುದು.
ಲವ್ ಕ್ಷೇತ್ರದಲ್ಲಿ
1.      ಬೇಚಲರ್ಸ್ಗಳಿಗೆ ಮದುವೆ ಯೋಗವುಂಟು. ಅದೇ ಈವಾಗಲೇ ಸಂಬಂಧದಲ್ಲಿರುವವರಿಗೆ ಮದುವೆ ಗ್ಯಾರಂಟಿ.
2.      ಮದುವೆ ಜೀವನ ಅತೀ ಉತ್ತಮ
3.      ಒಳ್ಳೇ ಮೇಚ್ ಸಿಗಬೇಕಾದರೆ, ನಿಮ್ಮ ಗುಣಗಳಲ್ಲಿ +ವ್ ಬದಲಾವಣೆಗಳನ್ನ ಮಾಡಿಕೊಳ್ಳಬೇಕು.
4.      ನೀವು ಇಸ್ಟರವರೆಗೆ ಯಾರಾದರನ್ನ ಪ್ರೀತಿಸಿದಲ್ಲಿ ಪರಸ್ಥಳಕ್ಕೆ ಲವ್ ಟೂರ್ ಹೊಡೆಯುತ್ತೀರ.
ನಿಮ್ಮ ಹಣಕಾಸು ವಿಷಯದಲ್ಲಿ
1.      ಈ ವರ್ಷ ಒಳ್ಳೇ ವರ್ಷ ನಿಮಗೆ ಈ ಹಣಕಾಸಿನ ವಿಚಾರದಲ್ಲಿ. ಸುಗ್ಗೀ ಕಾಲವೆನ್ನಬಹುದು.
2.      ಎರಡನೇ ಭಾಗದಲ್ಲಿ ನಿಮ್ಮ ಸಂಸಾರದ ಸದಸ್ಯರುಗಳೊಡನೆ ಟೂರಿಗೆ ಹೋಗುವ ಸಮಯವಾಗಿರುತ್ತೆ.
3.      ನಿಮ್ಮ ಸ್ಥಿರ ಹಾಗೂ ಚರಾಸ್ತಿ ಇಮ್ಮಡಿಯಾಗುವ ಸಂದರ್ಭ.


ಆರೋಗ್ಯ ಕ್ಷೇತ್ರದಲ್ಲಿ
1.      ನೀವು ಈ ವರುಷ ಹೆಚ್ಚಿಗೆ ಟೆನ್ಷನ್ ತೆಗೆದುಕೊಳ್ಳದಿರಿ.
2.      ಆರಾಮವಾಗಿರಲು ನೋಡಿ.
3.      ಈ ವರ್ಷ ನಿಮ್ಮ ಭಾರ/ತೂಕ ಹೆಚ್ಚಾಗಲು ಸಾಧ್ಯತೆ ಉಂಟು. ಅದಕ್ಕೆ ಸರಿಯಾಗಿ ಯೋಗ, ಮತ್ತು ಶರೀರದ ವ್ಯಾಯಾಮದ ಅಗತ್ಯತೆ ಜಾಸ್ತಿ.
4.      ನಿಮಗೆ ಹೊಟ್ಟೆ ಸಂಬಂಧಿತ ಹಾಗೂ ಜೋಯಿಂಟ್ಸ್ ಸಂಬಂಧಿತ ತೊಂದರೆಗಳು ಬರುವ ಸಾಧ್ಯತೆ ಉಂಟು.
ತಿಂಗಳ ಫಲಗಳು.
1.      ಏಪ್ರಿಲ್                        ನಿಮ್ಮ ಹಣಕಾಸಿನಲ್ಲಿ ಏರಿಕೆ
2.      ಮೇ                  ಆರೋಗ್ಯದಲ್ಲಿ ಎಚ್ಚರಿಕೆ
3.      ಜೂನ್             ವೃತ್ತಿಯಲ್ಲಿ ಹಾಗೂ ಬಿಸಿನೆಸ್ ಕ್ಷೇತ್ರದಲ್ಲಿ ಇಂಪೋರ್ಟೆಂಟ್  ಡಿಸಿಷನ್ ತೆಗೆದುಕೊಳ್ಳಲು ಅತೀ ಉತ್ತಮ ಸಮಯ.
4.      ಜುಲೈ               ನಿಮ್ಮ ಖರ್ಚಿನಲ್ಲಿ ಎಚ್ಚರಿಕೆ ಇರಲಿ.
5.      ಆಗಸ್ಟ್              ಹೊಟ್ಟೆ ಸಂಬಂಧಿತ ಕಾಹಿಲೆಗಳ ಬಗ್ಗೆ ಎಚ್ಚರಿಕೆ
6.      ಸಪ್ಟೆಂಬರ್      ನಿಮ್ಮ ಜೀವನದಲ್ಲಿ ಬದಲಾವಣೆ
7.      ಆಕ್ಟೋಬರ್     ಹೊಸ ಸಂಬಂಧಕ್ಕೆ ಬುನಾದಿಯ ಸಮಯ
8.      ನವೆಂಬರ್       ಧಾರ್ಮಿಕ ಟ್ರಿಪ್ಪಿಗೆ ಉತ್ತಮ ಸಮಯ
9.       ಡಿಸೆಂಬರ್       ನಿಮ್ಮ ಸಂಸಾರಕ್ಕೆ ಹಾಗೂ ನಿಮಗೆ ಅತೀ ಉತ್ತಮ ತಿಂಗಳು.
ಎಚ್ಚರಿಕೆ ಬಹು ಅಗತ್ಯ
1.      ಚಂದ್ರನು  ಸಿಂಹದಲ್ಲಿ, ಧನುರ ರಾಶಿಯಲ್ಲಿ ಹಾಗೂ ಕುಂಭ ರಾಶಿಯಲ್ಲಿರುವಾಗ ಯಾವುದೇ ಮುಖ್ಯ ಡಿಸಿಷ್ನನ್ ತೆಗೆದುಕೊಳ್ಳಲು ಬಹಳ ಎಚ್ಚರಿಕೆ ವಹಿಸಿ.
2.      ಸಪ್ಟೆಂಬರ್ ಹಾಗೂ ಆಕ್ಟೋಬರ್ ತಿಂಗಳು ನಿಮಗೆ ಯಾವುದೇ ಹೊಸತನ್ನ ಪ್ರಾರಂಭಿಸಲು ಒಳ್ಳೆಯ ಸಮಯ ಅಲ್ಲ.
3.      ಸ್ಥಿರ ಆಸ್ಥಿಯ ಬಗ್ಗೆ ಇದ್ದಲ್ಲಿ ಬಹು ಎಚ್ಚರಿಕೆಯನ್ನ ವಹಿಸಿ.
ಪರಿಹಾರ
1.      ಬ್ರಾಹ್ಮಣ ಪೂಜಾರಿಗೆ ಹಳದಿ ಬಟ್ಟೆಯನ್ನ ದಾನ ಮಾಡಿ.
2.      ಮುತ್ತನ್ನ ಧರಿಸಿ.
3.      ಹನುಮಾನ್ ಚಾಲೀಸನ್ನ ಓದಿ.
4.      ಗುರುವಾರ ಗುರುವಾರ ಉಪವಾಸವನ್ನ ಮಾಡಿ.
5.      ದುರ್ಗಾ ಚಾಲೀಸನ್ನ ಪಠಿಸಿ.




ಉಗಾದಿ ಭವಿಷ್ಯ ೨೦೧೬ (೦೮-೦೪-೨೦೧೬) ಚೈತ್ರ ಶುಕ್ಲ ಪ್ರತಿಪತ್ ತಿಥಿ.
ಈಗ ಮಿಥುನ ರಾಶಿಯವರಿಗೆ ೨೦೧೬ ಉಗಾದಿ ಫಲ ಹೇಗಿದೆ ಎಂದು ನೋಡೋಣ :-
ಈಗ ಈ ರಾಶಿಯವರಿಗೆ ಪ್ರಮುಖ ಗ್ರಹಗಳು ಎಲ್ಲೆಲ್ಲಿ ಇರುತ್ತಾರೆಂದು ನೋಡೋಣ.
ದುರ್ಮುಖಿ ನಾಮ ಸಂವತ್ಸರದ ಶುರುವಾತೇ ಏಪ್ರಿಲ್ ೮, ೨೦೧೬ ಚೈತ್ರ ಶುಕ್ಲ ಪಾಡ್ಯ ತಿಥಿಯಂದು. ಇದು ಮುಂದಿನ ವರ್ಷ ಮಾರ್ಚ್ ೨೭ ರವರೆಗೆ ಇರುತ್ತದೆ.
ಪಾಸ್ಚಿಮಾತ್ಯದ ರೀತ್ಯ, ಸೂರ್ಯ ಸಿಧ್ಧಾಂತದ ಪ್ರಕಾರ ಮೇ ೨೧ ರಿಂದ ಜೂನ್ ೨೦ ರಂದು ಹುಟ್ಟಿದಂತಹ ವ್ಯಕ್ತಿಗಳಿಗೆಲ್ಲಾ ಮಿಥುನ ರಾಶಿ ಬರುತ್ತೆ.
ಅದೇ ವೇದಿಕ್ ಆಸ್ಟ್ರೋಲಜಿಯ ಪ್ರಕಾರ, ಚಂದ್ರ ಸಿಧ್ಧಾಂತದ ರೀತ್ಯ, ಮಾನವನು ಜನ್ಮವನ್ನ ಎತ್ತಿದಾವಾಗ ಚಂದ್ರನು, ಮಿಥುನ ರಾಶಿಯಲ್ಲಿದ್ದರೆ, ಮಿಥುನ ರಾಶಿಯವರಾಗುತ್ತಾರೆ.
ಮಿಥುನ ರಾಶಿಯವರಿಗೆ ಈ ವರ್ಷ ಪೂರ್ತಿ ಗುರು ಗ್ರಹವು ೩ ಮತ್ತು ೪ ನೇ ಮನೆಯಲ್ಲಿರುತ್ತಾನೆ. 
ಅದೇ ಶನಿ ಮಹಾರಾಜನು ೬ ಮತ್ತು ೭ ನೇ ಮನೆಯಲ್ಲಿರುತ್ತಾನೆ.
ಇನ್ನು ರಾಹು ಕೇತುಗಳು ೩ ಮತ್ತು ೯ನೇ ಮನೆಯಲ್ಲಿ ಹಾಗೂ ನಂತರ ಕೆಲವು ದಿನಗಳಲ್ಲಿ, ೨ ಮತ್ತು ೮ ನೇ ಮನೆಯಲ್ಲಿರುತ್ತಾರೆ.
ನಿಮ್ಮ ಸಂಸಾರದ ಸದಸ್ಯರುಗಳಿಗೆ ಸಾಮಾನ್ಯ ಭವಿಷ್ಯ:-
1.       ನಿಮ್ಮ ಗಂಡ-ಹೆಂಡತಿಯರ ಸಂಬಂಧ ಒಳ್ಳೇ ಫ಼ೇವಿಕಾಲ್ ಹಾಕಿದ ಹಾಗೆ ಅಂಟಿಕೊಂಡೇ ಇರುತ್ತೆ.
2.       ನಿಮಗೇ ಅನ್ನಿಸುತ್ತೆ ನಿಮ್ಮ ಜೀವನ ಸುಖಕರ ಹಾಗೂ  ಅತೀ ಉತ್ತಮ ಸಮಯ ನಿಮ್ಮ ಮುಂದಿದೆ.
3.       ಆದರೆ ನಿಮ್ಮ ತಂದೆಯ ಜೊತೆಯಲ್ಲಿ ಸ್ವಲ್ಪ ಕಟಿ-ಪಿಟಿ ಉಂಟು.
ನಿಮ್ಮ ಕೇರಿಯರ್ ಬಗ್ಗೆ ಸಾಮಾನ್ಯ ಭವಿಷ್ಯ:-
1.       ನಿಮ್ಮ ಲೀಡರ್ಶಿಪ್ ಕ್ವೇಲಿಟಿಯು ನಿಮ್ಮ ಜೀವನದಲ್ಲಿ ಏಣಿಯನ್ನ ಹತ್ತಲು ಸಹಾಯವನ್ನ ಮಾಡುತ್ತೆ.
2.       ನಿಮ್ಮ ಕೆಲಸವನ್ನ ಸಮಯದೊಳಗೆ ಮಾಡಲು ಮರೆಯದಿರಿ.
3.       ನಿಮ್ಮ ಗುಂಪಿನವರೊಡನೆ ಉತ್ತಮ ಸಂಬಂಧವನ್ನ ಇಟ್ಟುಕೊಳ್ಳಿ.
ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಸಾಮಾನ್ಯ ಜ್ಯೋತಿಷ್ಯ:-
1.      ನಿಮ್ಮ ವಿದ್ಯಾಭ್ಯಾಸದಲ್ಲಿ ಅಡಚಣೆ ಉಂಟು. ಆದರೆ ನಿಮಗೆ ಏಕಾಗ್ರತೆ ಮುಖ್ಯ.
2.      ನಿಮ್ಮ ಧೃಢ ಸಂಕಲ್ಪವೇ ನಿಮ್ಮ ಏಳಿಗೆಗೆ ಮೆಟ್ಟಿಲಾಗುತ್ತೆ.
ನಿಮ್ಮ ಲವ್ ವಿಚಾರದಲ್ಲಿ ಸಾಮಾನ್ಯ ಭವಿಷ್ಯ:-
1.      ನಿಮ್ಮ ಲವ್ ಲೈಫ಼ನಲ್ಲಿ ಅಲ್ಲೋಲ ಕಲ್ಲೋಲ ಉಂಟು ಈ ವರ್ಷಆದರೆ ತಾಳ್ಮೆ ಇರಲಿ.
2.      ನಿಮ್ಮ ಮೊದಲಾರ್ಧದಲ್ಲಿ ಯಾವುದೇ ವಿಷಯದಲ್ಲಿ ಗೊಂದಲ ಉಂಟು. ಆದರೆ ಮುಂದಿನ ಅರ್ಧ ಭಾಗದಲ್ಲಿ ಅದಕ್ಕೆ ಪರಿಹಾರ ಸಿಗುತ್ತೆಗೊಂದಲ ಅನ್ಯಥಾ ಪಡಬೇಡಿ.
ನಿಮ್ಮ ಹಣಕಾಸಿನ ವಿಚಾರದಲ್ಲಿ ಸಾಮಾನ್ಯ ಭವಿಷ್ಯ:-
1.      ನಿಮಗೆ ಈ ವರ್ಷ ಈ ಹಣ ಕಾಸಿನ ವಿಚಾರದಲ್ಲಿ ಬಂಪರ್ ಸುದ್ದಿ.
2.      ನಿಮ್ಮ ಹಳೇ ಸಾಲವನ್ನ ತೀರಿಸಿ, ಹೊಸದನ್ನ ಯೋಚಿಸಬಹುದು.
3.      ನೀವು ಇದುವರೆಗೆ ಯಾವುದೇ ಮಿಸ್ಟೇಕ್ ಮಾಡಿದ್ದರೂ, ಈಗ ನೀವು ಬಹಳ ಚತುರರಾಗಿದ್ದೀರ.
4.      ನೀವು ಅತೀ ದೊಡ್ಡ ವ್ಯವಹಾರಕ್ಕೆ ಕೈ ಹಾಕುವಿರಿ. ಚಿಂತೆಯನ್ನ ಬಿಡಿ, ಚಿಂತನವನ್ನ ಮಾಡಿ.
ನಿಮ್ಮ ಆರೋಗ್ಯದ ಬಗ್ಗೆ ಸಾಮಾನ್ಯ ಭವಿಷ್ಯ :-
1.      ಅಂತಹ ಮೇಜರ್ ಕಾಳಜಿ ಬೇಡ.
2.      ಆರೋಗ್ಯಕರ ಆಹಾರವನ್ನ ಹಾಗೂ ಮಿತ ಆಹಾರವನ್ನ ಸೇವಿಸಲು ಮರೆಯದಿರಿ.
3.      ಶನಿಯು ೬ ನೇ ಮನೆಯಲ್ಲಿರುವುದೇ ನಿಮಗೆ ಆಶೀರ್ವಾದ.
ತಿಂಗಳ ಭವಿಷ್ಯ:-
1.      ಏಪ್ರಿಲ್                        ಸಂಸಾರಿಗರೊಂದಿಗೆ ಉತ್ತಮ ಸಂಬಂಧ
2.      ಮೇ                  ಹೊಸ ಏಕ್ಟಿವಿಟೀಸಿಗೆ ಇದು ಉತ್ತಮ ತಿಂಗಳು.
3.      ಜೂನ್             ನಿಮ್ಮ ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ವಹಿಸಿ.
4.      ಜುಲೈ               ಹೊಸ ಜೋಬ್ ಮತ್ತು ನಿಮ್ಮ ಹಣ ಕಾಸಿನಲ್ಲಿ ಉತ್ತೀರ್ಣತೆ.
5.      ಆಗಸ್ಟ್              ನಿಮ್ಮ ವೈಯುಕ್ತಿಕ ಹಾಗೂ ನಿಮ್ಮ ಕೆಲಸದ ವಿಚಾರದಲ್ಲಿ ಜಾಗ್ರತೆ ವಹಿಸಿ.
6.      ಸಪ್ಟೆಂಬರ್       ತಿಂಗಳು ನಿಮಗೆ ಹಣಕಾಸಿನ ವಿಚಾರದಲ್ಲಿ ಬಂಪರ್.
7.      ಆಕ್ಟೋಬರ್   ನಿಮ್ಮ ಆರೋಗ್ಯದ ವಿಚಾರದಲ್ಲಿ ಸಣ್ಣ ಕಾಳಜಿ.
8.      ನವೆಂಬರ್       ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗ್ರತೆ ಇರಲಿ.
9.      ಡಿಸೆಂಬರ್      ಈ ತಿಂಗಳು ನಿಮ್ಮ ಸಂಸಾರಿಗರೊಡನೆ ಆರಾಮದಿಂದಿರಿ
ಎಚ್ಚರಿಕೆ:-
1.      ಯಾವುದೇ ಮೇಜರ್ ಡಿಸಿಶನ್ ತೆಗೆದುಕೊಳ್ಳದಿರಿ.
2.      ನಿಮ್ಮ ಸಿಟ್ಟಿನ ಬಗ್ಗೆ ನಿಮಗೆ ಕಂಟ್ರೋಲ್ ಇರಲಿ.
3.      ಯಾವುದೇ ವಾದಗಳಿಗೆ ತಲೆಯನ್ನ ಕೊಡದಿರಿ.
4.      ಹಲವಾರು ದೋಣಿಗಳಿಗೆ ಕಾಲನ್ನ ಹಾಕದಿರಿ.
5.      ಒಂದೇ ಗುರಿಯೊಡನೆ ಕೆಲಸ ಮಾಡಿದಲ್ಲಿ ಶ್ರೇಯಸ್ಸು.
ಪರಿಹಾರ :-
1.      ಶನಿ ದಶಾ ಇರುವವರು ಹನುಮಾನ್ ಚಾಲೀಸಾ ಓದಿರಿ.
2.      ಕಡಲೇ ಬೇಳೆಯನ್ನ ನೀರಿನಲ್ಲಿ ನೆನಸಿ, ದನಕ್ಕೆ ಕೊಟ್ಟಲ್ಲಿ ಗುರು ಸಂಪ್ರೀತಿ.
3.      ಹಳದಿ ಬಟ್ಟೆಯನ್ನ ಗುರುಗಳು ಹಾಗೂ ಬ್ರಾಹ್ಮಣರಿಗೆ ದಾನ ಮಾಡಿರಿ.
4.      ಗುರುವಾರದಂದು ಉಪವಾಸ ಮಾಡಿರಿ.
5.      ರಾಹು-ಕೇತುವನ್ನ ಸಂತೋಶಗಳಿಸಲು ದೇವೀ ಕವಚವನ್ನ ಪಠಿಸಿ.
6.      ಪ್ರತೀ ದಿನ ವಿಷ್ಣು ಸಹಸ್ರನಾಮವನ್ನ ಪಠಿಸಿದರೆ, ನಿಮ್ಮ ಜೀವನದಲ್ಲಿ ಪ್ರೋಸ್ಪೆರಿಟಿ ಖಂಡಿತ.


ಉಗಾದಿ ಭವಿಷ್ಯ ೨೦೧೬ (೦೮-೦೪-೨೦೧೬) ಚೈತ್ರ ಶುಕ್ಲ ಪ್ರತಿಪತ್ ತಿಥಿ.
ಈಗ ಕರ್ಕ ರಾಶಿಯವರಿಗೆ ೨೦೧೬ ಉಗಾದಿ ಫಲ ಹೇಗಿದೆ ಎಂದು ನೋಡೋಣ :-
ಈಗ ಈ ರಾಶಿಯವರಿಗೆ ಪ್ರಮುಖ ಗ್ರಹಗಳು ಎಲ್ಲೆಲ್ಲಿ ಇರುತ್ತಾರೆಂದು ನೋಡೋಣ.
ದುರ್ಮುಖಿ ನಾಮ ಸಂವತ್ಸರದ ಶುರುವಾತೇ ಏಪ್ರಿಲ್ ೮, ೨೦೧೬ ಚೈತ್ರ ಶುಕ್ಲ ಪಾಡ್ಯ ತಿಥಿಯಂದು. ಇದು ಮುಂದಿನ ವರ್ಷ ಮಾರ್ಚ ೨೭ರಂದು ಅಂತ್ಯವಾಗುತ್ತದೆ.
ಪಾಸ್ಚಿಮಾತ್ಯದ ರೀತ್ಯ, ಸೂರ್ಯ ಸಿಧಾಂತದ ಪ್ರಕಾರ ಜೂನ್ ೨೧ ರಿಂದ ಜುಲೈ ೨೧ ರಂದು ಹುಟ್ಟಿದಂತಹ ವ್ಯಕ್ತಿಗಳಿಗೆಲ್ಲಾ ಕರ್ಕ ರಾಶಿ ಬರುತ್ತೆ.
ಅದೇ ವೇದಿಕ್ ಆಸ್ಟ್ರೋಲಜಿಯ ಪ್ರಕಾರ, ಚಂದ್ರ ಸಿಧಾಂತದ ರೀತ್ಯ, ಮಾನವನು ಜನ್ಮವೆತ್ತಿದಾವಾಗ ಚಂದ್ರನು, ಕಟಕ ರಾಶಿಯಲ್ಲಿದ್ದರೆ, ಕಟಕ ರಾಶಿಯವರಾಗುತ್ತಾರೆ.
ಕಟಕ ರಾಶಿಯವರಿಗೆ ಗುರು ಗ್ರಹವು ೨ ಮತ್ತು ೩ ನೇ ಮನೆಯಲ್ಲಿರುತ್ತಾನೆ ಈ ವರ್ಷ ಪೂರ್ತಿ.
ಅದೇ ಶನಿ ಮಹಾರಾಜನು ೫ ಮತ್ತು ೬ ನೇ ಮನೆಯಲ್ಲಿರುತ್ತಾನೆ.
ಇನ್ನು ರಾಹು ಕೇತುಗಳು ೨ ಮತ್ತು ೭ನೇ ಮನೆಯಲ್ಲಿ ಹಾಗೂ ನಂತರ ಕೆಲವು ದಿನಗಳಲ್ಲಿ, ೧ ಮತ್ತು ೮ ನೇ ಮನೆಯಲ್ಲಿರುತ್ತಾರೆ.
ನಿಮ್ಮ ಸಂಸಾರದ ಸದಸ್ಯರುಗಳಿಗೆ ಸಾಮಾನ್ಯ ಭವಿಷ್ಯ:-
1.       ನಿಮ್ಮ ಸಂಸಾರದ ಜೊತೆಯಲ್ಲಿ ತೊಂದರೆಗಳು ಉದ್ಭವಿಸುತ್ತವೆ.
2.       ಆದರೆ ನಿಮ್ಮ ಸ್ಪೌಸ್ನಿಂದ ಬಹಳ ಸಹಕಾರ ಸಿಗುತ್ತೆ. ಅದರಿಂದಾಗಿ ತೊಂದರೆಗಳ ನಿವಾರಣೆ.
3.       ತಾಳ್ಮೆ ನಿಮಗೆ ಸದಾ ಇರಲಿ. ಸಾಧಾರಣವಾಗಿ ತಾಳ್ಮೆಯೇ ನಿಮ್ಮ ಉತ್ತಮ ಸಂಪತ್ತು! ಕಾರಣ ನಿಮ್ಮ ರಾಶ್ಯಾಧಿಪತಿ ಚಂದ್ರ. ಆತ ಸೀತಗ್ರಹ ಹಾಗೂ ನಿಮ್ಮ ರಾಶಿ ಶುಧ್ಧ ಜಲದ ರಾಶಿ!
4.       ನೀವೆಲ್ಲಾದರೂ ಕೋಪವನ್ನ ಮಾಡಿದಿರೀ, ಅದು ನಿಮಗೆ ಡಿಸಿಷನ್ ತೆಗೆದುಕೊಳ್ಳಲು ತೊಂದರೆ ಮಾಡೀತು.
ನಿಮ್ಮ ಕೇರಿಯರ್ ಬಗ್ಗೆ ಸಾಮಾನ್ಯ ಭವಿಷ್ಯ:-
1.      ಸಾಮನ್ಯವಾಗಿ ಚಲ್ಲೇಂಜಸ್ ನಿಮ್ಮ ದಾರಿಗೆ ಅಡ್ಡ (ರುಕಾವಟ್) ಮಾಡುತ್ತೆ.
2.      ಆದರೆ ನಿಮ್ಮ ಕ್ರಿಯೇಟಿವಿಟಿ ಹಾಗೂ ದೂರಾಲೋಚನೆಯಿಂದಾಗಿ, ಅದು ನಿವಾರಣೆ ಆಗುತ್ತೆ. ನಿಮ್ಮದ್ದು ಜ್ನಾನದ ರಾಶಿ. ಇಡೀ ಭಚಕ್ರದಲ್ಲಿ ನಿಮಗಿರುವಸ್ಟು ಜ್ನಾನ ಯಾರಿಗೂ ಇಲ್ಲ.
3.      ಸಮಯದೊಳಗೆ ನಿಮ್ಮ ಕೆಲಸವನ್ನ ಮುಗಿಸಲು ನೋಡಿ.
4.      ನಿಮಗೆ ಜೋಬಿನಲ್ಲಿ ಬದಲಾವಣೆ ಉಂಟು ನೇವಿಲ್ಲಿಯಾದರೂ ಲಾಯರ್ ಆಗಿದ್ದಲ್ಲಿ, ಜಡ್ಜ್ ಆಗುವ ಸಂದರ್ಭ ಜಾಸ್ತಿ ಕಾಣಿಸುತ್ತೆ.
5.      ಪ್ರಮೋಷನ್ ಗಟ್ಟಿ ಇಲ್ಲಾ ಸಂಬಳದಲ್ಲಿ ಹೆಚ್ಚಳದ ಸಾಧ್ಯತೆ.



ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಸಾಮಾನ್ಯ ಜ್ಯೋತಿಷ್ಯ:-
1.      ನಿಮ್ಮ ಅತಿಮ ಅರ್ಧ ಭಾಗದಲ್ಲಿ ನಿಮ್ಮ ಹೈಯರ್ ಸ್ಟಡೀಸಿಗೆ ತೊಂದರೆಗಳು ಉದ್ಭವಿಸುವವು.
2.      ಆದರೆ ಕಠಿಣ ಪರಿಶ್ರಮ ಮತ್ತು ಏಕಾಗ್ರಚಿತ್ತ ನಿಮ್ಮನ್ನ ಗೆಲುವಿನತ್ತ ಸಾಗಿಸುವುದು.
3.      ತಾಳ್ಮೆ ಮಾತ್ರ ಕಳೆಯದಿರಿ. ತಾಳಿದವನು ಬಾಳಿಯಾನು. ಇದನ್ನ ನಾನು ನಿಮಗೇಕೆ ಹೇಳುತ್ತೇನೆಂದು ಕೇಳುವಿರಾ? ಇದಕ್ಕೆ ಕಾರಣ ಎರಡನೇ ಮನೆಯಲ್ಲಿ ಆಗಸ್ಟ ೧೧ ರ ವರೆಗೆ ಗುರು ಮತ್ತು ರಾಹು ಇದ್ದು, ಗುರು-ಚಂಡಾಲ್ ಯೋಗವನ್ನ ಉಂಟುಮಾಡಿರುವುದು.
ನಿಮ್ಮ ಲವ್ ವಿಚಾರದಲ್ಲಿ ಸಾಮಾನ್ಯ ಭವಿಷ್ಯ:-
1.       ನಿಮ್ಮ ಲವ್ ಮತ್ತು ರೋಮೇನ್ಸಿಗೆ ಇದು ಉತ್ತಮ ಕಾಲ. ಅಂದರೆ ನೀವು ಇದರಲ್ಲಿ ಯಾವತ್ತೂ ಕಡಿಮೆಯವರಲ್ಲ ಅಂತ ಮಾಡಿ!
2.       ಯಾವುದೇ ಕಹಿ ಅನುಭವಗಳಿದ್ದಲ್ಲಿ ಅದು ಈ ವರ್ಷ ಸಿಹಿಯಾಗಿ ಪರಿಣಮಿಸುವುದು.
ನಿಮ್ಮ ಹಣಕಾಸಿನ ವಿಚಾರದಲ್ಲಿ ಸಾಮಾನ್ಯ ಭವಿಷ್ಯ:-
1.       ಈ ವರ್ಷ ಹಣ ಕಾಸಿನ ವಿಚಾರದಲ್ಲಿ ನಿಮಗೆ ಸುಗ್ಗಿಯೋ ಸುಗ್ಗಿ. ಯವ ವರ್ಷ ನಿಮಗೆ ಈ ವಿಚಾರದಲ್ಲಿ ಕಡಿಮೆ ಇತ್ತು ಹೇಳಿ? ನಾನು ಸತತವಾಗಿ ಎರಡು ವರುಷದಿಂದ ಫೇಸ್ಬುಕ್ಕಿಗೆ ಈ ಭವಿಷ್ಯವನ್ನ ಅಪ್ಲೋಡ್ ಮಾಡುತ್ತಾ ಬಂದಿರುವೆ. ಆದರೆ ನನ್ನ ಭವಿಷ್ಯದಲ್ಲಿ, ನಿಮ್ಮ ರಾಶಿಗಂತೂ ಹಣವೇ ಹಣ. ಹಣ್ಣ ಇಲ್ಲಾಂದ್ರೆ ಆಸ್ತಿಯೋ ಆಸ್ತಿ. ಅದೂ ಇಲ್ಲಾಂದ್ರೆ ಮನೆ ಕಟ್ಟಲು ಮೆಟೀರಿಯಲ್ಲೋ ಮೆಟೀರಿಯಲ್! ಇನ್ನೇನು ಬೇಕು ಹೇಳಿ? ಈ ವರ್ಷ ಬೇರೆ ನಿಮಗೆ ಪ್ರಮೋಷನ್ ಕೂಡಾ ಭವಿಷ್ಯ ನುಡಿದಿದ್ದೇನೆ.
2.       ಸ್ಥಿರ ಆಸ್ತಿಯ ಬಗ್ಗೆ ವಿಚಾರಗಳನ್ನ ಮಾಡಬಹುದು. ಆದರೆ ನೀವು ಯಾವತ್ತು ಇದರ ಬಗ್ಗೆ ಯೋಚನೆಯನ್ನ ಮಾಡಿಲ್ಲ ಹೇಳಿ!
ನಿಮ್ಮ ಆರೋಗ್ಯದ ಬಗ್ಗೆ ಸಾಮಾನ್ಯ ಭವಿಷ್ಯ :-
1.       ನೀವು ಆರೋಗ್ಯದಿಂದ ಇಡೀ ವರ್ಷ ಇರುವಿರಿ. ಮತ್ತೆ ಜೀವನದಲ್ಲಿ ಇನ್ನೇನು ಬೇಕು ಹೇಳಿ? ಆರೋಗ್ಯವೇ ಭಾಗ್ಯ ಅಂತ ಎಲ್ಲರಿಗೂ ತಿಳಿದಿರುವ ವಿಷಯವೇ. ಈ ದೇಹ ಗಟ್ಟಿಯಾಗಿರಲಿಕ್ಕೇ ಅಲ್ಲವೇ ನೀವು ಹಣವನ್ನ ಗೋಚಿ ಚೀಲಕ್ಕೆ ತುಂಬುತ್ತಿರುವುದು?
2.       ನಿಮ್ಮ ದೇಹಕ್ಕೆ ತೊಂದರೆ ಆಗುವ ಪದಾರ್ಥಗಳನ್ನ ಸೇವಿಸದಿರಿ.
ತಿಂಗಳ ಭವಿಷ್ಯ:-
1.      ಏಪ್ರಿಲ್                        ನಿಮ್ಮ ಕೇರೀಯರಿಗೆ, ವಿದ್ಯಾಭ್ಯಾಸಕ್ಕೆ ಉತ್ತಮ ಸಮಯ.
2.      ಮೇ                  ನಿಮ್ಮಲ್ಲಿ ಅತೀ ಹೆಚ್ಚು ಎನರ್ಜಿ ಈ ತಿಂಗಳು ಇರುತ್ತೆ.
3.      ಜೂನ್             ಈ ತಿಂಗಳು ನೀವು ಬಹಳ ಉತ್ಸುಕರಾಗಿರುತ್ತೀರ.
4.      ಜುಲೈ               ಸ್ನೇಹಿತರೊಂದಿಗೆ  ಸಂಸಾರದೊಂದಿಗೆ ಸುಖವಾಗಿರಿ.
5.      ಆಗಸ್ಟ್              ರಜಕ್ಕೆ ಹೋಗಲು ತಕ್ಕ ಸಮಯ. ಖರ್ಚಿನಲ್ಲಿ ಮಿತಿ ಇರಲಿ.
6.      ಸಪ್ಟೆಂಬರ್      ಮಕ್ಕಳೊಂದಿಗೆಒಳ್ಳೇ ಸಂಬಂಧವನ್ನ ಬೆಳೆಸಿರಿ.
7.      ಆಕ್ಟೋಬರ್     ಸಾಮಾಜಿಕ ಏಕ್ಟಿವಿಟಿಸ್ಗೆ ಸ್ವಲ್ಪ ಒತ್ತನ್ನ ಕೊಡಿರಿ.
8.      ನವೆಂಬರ್       ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
9.      ಡಿಸೆಂಬರ್       ಈ ತಿಂಗಳು ನಿಮ್ಮ ಕೇರಿಯರ್ ಬಗ್ಗೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿಯನ್ನ ವಹಿಸಿ.
ಎಚ್ಚರಿಕೆ:-
1.      ಏಪ್ರಿಲ್ನಿಂದ ಆಗಸ್ಟ್ ವರೆಗೆ ಯಾವುದೇ ಬಿಗ್ ಇನ್ವೆಸ್ಟ್ಮೆಂಟ್ಸನ್ನ ಮಾಡದಿರಿ.
2.      ಈ ಪೀರಿಯಡ್ನಲ್ಲಿ ನಿಮ್ಮ ಏಟಿಟ್ಯೂಡನ ಬಗ್ಗೆ ಕಾಳಜಿ ವಹಿಸಿ.
3.      ನೀವೇ ಯಾವುದೇ ಡಿಸಿಷನ್ ತೆಗೆದುಕೊಳ್ಳದೆ ಬೇರವರ ಸಹಾಯವನ್ನ ತೆಗೆದುಕೊಳ್ಳೀ.
ಪರಿಹಾರ :-
1.       ದೇವೀ ಕವಚವನ್ನ ರಾಹು ಮತ್ತು ಕೇತು ದೋಷಕ್ಕೆ ಪಠಿಸಿ.
2.       ಹನುಮಾನ್ ಚಾಲೀಸವನ್ನ ಶನಿ ದೋಷಕ್ಕೆ ಪಠಿಸಿ.
3.       ಗುರುವಾರವನ್ನ ಗುರು ಗ್ರಹಕ್ಕಾಗಿ ಆಚರಿಸಿ.
ಉಗಾದಿ ಭವಿಷ್ಯ ೨೦೧೬ (೦೮-೦೪-೨೦೧೬) ಚೈತ್ರ ಶುಕ್ಲ ಪ್ರತಿಪತ್ ತಿಥಿ.

ಈಗ ಸಿಂಹ ರಾಶಿಯವರಿಗೆ ೨೦೧೬ ಉಗಾದಿ ಫಲ ಹೇಗಿದೆ ಎಂದು ನೋಡೋಣ :-
ಪಾಸ್ಚಿಮಾತ್ಯದ ಪ್ರಕಾರ, ಯಾರು ಜುಲೈ ೨೦ ರಿಂದ ಆಗಸ್ಟ್ ೨೧ ರ ಮಧ್ಯ ಹುಟಿರುತ್ತಾರೋ, ಅವರು ಭಚಕ್ರದಲ್ಲಿ ಸಿಂಹ ರಾಶಿಯವರು ಎನ್ನಿಸಿಕೊಳ್ಳುತ್ತಾರೆ.
ಆದರೆ ಅದೇ ವೇದಿಕ್ ಆಸ್ಟ್ರೋಲೋಜಿಯ ಪ್ರಕಾರ ಚಂದ್ರನು ಜನ್ಮದಲ್ಲಿ ಸಿಂಹ ರಾಶಿಯಲ್ಲಿದ್ದರೆ, ಅವರುಗಳು ಸಿಂಹ ರಾಶಿಯವರು ಎನ್ನಿಸಿಕೊಳ್ಳುತ್ತಾರೆ.
ಇವರುಗಳಿಗೆ ಗುರು ಗ್ರಹವು ರಾಶಿಯಲ್ಲಿಯೇ ಪ್ರಥಮಾರ್ಧದಲ್ಲಿರುತ್ತಾನೆ. ಆಮೇಲೆ ೧೧ ಆಗಸ್ಟರ ನಂತರ, ಕನ್ಯಾಕ್ಕೆ , ಅಂದರೆ ಇವರ ಎರಡನೇ ಮನೆಗೆ ಹೋಗುವನು.
ಅದೇ ಶನಿ ಗ್ರಹವು ಇವರ ಸುಖ ಸ್ತಾನವಾದ ೪ ನೇ ಮನೆಯಲ್ಲಿರುವನು. ಮುಂದೆ ಫೆಬ್ರುವರಿ ೨೦೧೭ ರ ನಂತರ, ೫ ನೇ ಮನೆಗೆ ಹೋಗಲಿಕ್ಕಿರುವನು.
ಇನ್ನು ರಾಹು ಮತ್ತು ಕೇತು ಗ್ರಹಗಳು ೧-೭ ರ ಏಕ್ಸಿಸನಲ್ಲಿ ಈಗ ಇದ್ದರೆ, ಆಮೇಲೆ ಅವರುಗಳು ೧೨-೬ ರ ಏಕ್ಸಿಸ್ಗೆ ಹೋಗುವರು.
ನಮ್ಮ ಹಿಂದೂ ಕೇಲೆಂಡರ್ ಪ್ರಕಾರ, ದುರ್ಮುಖಿನಾಮ ಸಂವತ್ಸರವು ಏಪ್ರಿಲ್ ೮ ರಂದು ಶುರುವಾಗಿ ಮಾರ್ಚ್ ೨೭, ೨೦೧೭ರಂದು ಅಂತ್ಯಗೊಳ್ಳುತ್ತದೆ.
ನಿಮ್ಮ ಸಂಸಾರದ ಸದಸ್ಯರುಗಳಿಗೆ ಸಾಮಾನ್ಯ ಭವಿಷ್ಯ:-
1.       ನಿಮ್ಮ ತಂದೆಯವರ ಜೊತೆಯಲ್ಲಿ ಸಂಬಂಧವು ಒಳ್ಳೆಯದಿದ್ದಲ್ಲಿ, ತಾಯಿಯ ಜೊತೆಗಿನ ಸಂಬಂಧ ಅಸ್ಟೊಂದು ಉತ್ತಮವಿಲ್ಲ.
2.       ತಾಳ್ಮೆಯು ಅತೀ ಅಗತ್ಯ. ತಾಳಿದವನು ಬಾಳಿಯಾನು ಎಂಬ ಗಾದೆಯ ಮಾತೇ ಇದೆ.
3.       ನಿಮ್ಮ ಸಂಬಂಧ ಬೇರೆ ಸಂಸಾರದ ಸದಸ್ಯರುಗಳ ಜೊತೆಯಲ್ಲಿ ಒಳ್ಳೆಯದಿದೆ.


ನಿಮ್ಮ ಕೇರಿಯರ್ ಬಗ್ಗೆ ಸಾಮಾನ್ಯ ಭವಿಷ್ಯ:-
1.       ನಿಮ್ಮ ಪ್ಲೇನುಗಳನ್ನ ಇಂಪ್ಲಿಮೆಟ್ಸ್ ಮಾಡಲು ಇದು ನಿಮಗೆ ಸರಿಯಾದ ಸಮಯವಾಗಿರುತ್ತದೆ.
2.       ನಿಮ್ಮ ವೃತ್ತಿಯಲ್ಲಿಯೂ ಕೂಡ ನೀವೊಂದು ಸ್ಥಿರತೆಯನ್ನ ತಂದುಕೊಳ್ಳಬಹುದು.
3.       ಪ್ರಥಮಾರ್ಧದಲ್ಲಿ ನಿಮ್ಮ ಬಿಸಿನೆಸ್ಸಿನಲ್ಲಿ ಏರು ಹಾಗೂ ಲಾಭದಾಯಕ.
4.       ನೀವು ನಿಮ್ಮ ಡಿಸಿಷನ್ನಲ್ಲಿ ಬಹಳ ಪ್ರೇಕ್ಟಿಕಲ್ ಆಗಬೇಕು. ಇದನ್ನ ನೀವು ಗೆದ್ದಲ್ಲಿ ನಿಮಗೆ ಇದು ಉತ್ತಮ ವರ್ಷ.
ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಸಾಮಾನ್ಯ ಜ್ಯೋತಿಷ್ಯ:-
1.       ಈ ವರ್ಷ ನಿಮಗೆ ಅತೀ ಕಠಿಣದ ವರ್ಷವಾಗಿರುತ್ತೆ. ಇದಕ್ಕಾಗಿ ಅಧ್ಯಾಪಕರ ಹಾಗೂ ನಿಮಗಿಂತ ಹಿರಿಯರ ಸಲಹೆಗಳನ್ನ ಕೇಳಿ.
2.       ನೀವು ಸಾಧಾರಣಕ್ಕಿಂತ ಹೆಚ್ಚಿಗೆ ಕೆಲಸವನ್ನ ಮಾಡಬೇಕಾಗುತ್ತೆ.
3.       ಒತ್ತಡವು ನಿಮ್ಮ ಮೇಲೆ ಅತಿ ಉತ್ತಮ ರೀತಿಯಲ್ಲಿ ಕೆಲಸವನ್ನ ಮಾಡುತ್ತದೆಂದು ನಿಮಗೆ ತಿಳಿದಿರಬೇಕು.
4.       ನಿಮಗೆ ಯಾವುದು ಮುಖ್ಯವೋ ಅದರಲ್ಲಿ ನೀವು ಹೆಚ್ಚಿಗೆ ಕೇಂದ್ರೀಕರಿಸಿ.
ನಿಮ್ಮ ಲವ್ ವಿಚಾರದಲ್ಲಿ ಸಾಮಾನ್ಯ ಭವಿಷ್ಯ:-
1.      ಈ ವಿಚಾರದಲ್ಲಿ ನಿಮಗಿದು ಒಳ್ಳೆಯ ವರ್ಷ.
2.      ನಿಮ್ಮ ಒಡ ಹುಟ್ಟಿದವರಿಂದ ಒಳ್ಳೆಯ ಸನ್ಮಾನ ಹಾಗೂ ಮಾನ ಸಿಗುತ್ತೆ.
3.      ನಿಮ್ಮ ಸಂಸಾರ ಹಾಗೂ ಪ್ರೊಫೆಷನಲ್ ಜೀವನವನ್ನ ಸರಿ ತೂಗಿ. ಯಾವ ತೊಂದರೆಗಳೂ ಬರೋದಿಲ್ಲ.
4.      ಸ್ಪೌಸ್ ಜೊತೆಯಲ್ಲಿ ಸಣ್ಣ ತರದ ಕಟಿ-ಪಿಟಿ ಬರಬಹುದು. ಅದನ್ನ ನಿವಾರಿಸಿ.
ನಿಮ್ಮ ಹಣಕಾಸಿನ ವಿಚಾರದಲ್ಲಿ ಸಾಮಾನ್ಯ ಭವಿಷ್ಯ:-
1.      ಈ ವರ್ಷ ಈ ವಿಚಾರದಲ್ಲಿ ಬಹಳ ಕಸ್ಟಕರ ವರ್ಷ.
2.      ಪ್ರೋಪರ್ ಪ್ಲೇನಿಂಗನಿಂದಾಗಿ ನೀವು ಸ್ಥಿರತೆಯನ್ನ ತರಬಹುದು.
3.      ಎಲ್ಲೆಲ್ಲಿ ಖರ್ಚುಗಳಾಗುತ್ತವೆಂದು ಎಚ್ಚರದಿಂದ ಕಂಟ್ರೋಲ್ ಮಾಡಿ. ಎಲ್ಲಾ ಸರಿ ಹೋಗುತ್ತೆ.
4.      ಹೆಚ್ಚಿಗೆ ನಿಮ್ಮ ಹಣಕಾಸಿನ ರಕ್ಷಣೆಯನ್ನ ಮಾಡಬೇಕು ಈ ವರ್ಷ.
ನಿಮ್ಮ ಆರೋಗ್ಯದ ಬಗ್ಗೆ ಸಾಮಾನ್ಯ ಭವಿಷ್ಯ :-
1.      ಆರೋಗ್ಯದ ವಿಚಾರದಲ್ಲಿ ಸಣ್ಣ ಪುಟ್ಟ ತೊಂದರೆಗಳು ಬರಬಹುದು.
2.      ನಿಮ್ಮಲ್ಲಿ ಬಹಳಸ್ಟು ಎನರ್ಜಿ ಕ್ಡಿಮೆ ಇರುತ್ತೆ.
3.      ಹೊಟ್ಟೆಯ ವಿಚಾರವಾಗಿ ತೊಂದರೆಗಳು ಬರಬಹುದು. ಜಾಗ್ರತೆ.
4.      ನಿಮ್ಮ ಹೆಬಿಟ್ಸನ್ನ ಸ್ವಲ್ಪ ಬದಲಾಯಿಸಿಕೊಳ್ಳಿ. ಒಳ್ಳೆಯದಾಗುತ್ತೆ.
ತಿಂಗಳ ಭವಿಷ್ಯ:-
1.      ಏಪ್ರಿಲ್                                    ನಿಮ್ಮ ಭವಿಷ್ಯವನ್ನ ರೂಢಿಸುವಲ್ಲಿ ಉತ್ತಮ ತಿಂಗಳು.
2.      ಮೇ                              ಈ ತಿಂಗಳು ಎಲ್ಲಾ ಕ್ಷೇತ್ರದಲ್ಲಿ ತೊಂದರೆಯೋ ತೊಂದರೆ.
3.      ಜೂನ್                         ಈ ತಿಂಗಳು ಬಹಳ ಕ್ರೂಸಿಯಲ್ ಪೀರಿಯಡ್.
4.      ಜುಲೈ                           ಈ ತಿಂಗಳಲ್ಲಿ ನಿಮ್ಮ ಕೆಲಸಗಳೆಲ್ಲಾ ತಡವಾಗುತ್ತೆ.
5.      ಆಗಸ್ಟ್                          ಈ ತಿಂಗಳಲ್ಲಿ ಮಜವೇ ಮಜ. ಆನಂದಿಸಿ!
6.      ಸಪ್ಟೆಂಬರ್                  ಈ ತಿಂಗಳಲ್ಲಿ +ವ್ ಬದಲಾವಣೆ ಉಂಟಾಗುತ್ತೆ.
7.      ಆಕ್ಟೋಬರ್               ಈ ತಿಂಗಳು ನಿಮ್ಮ ಸಂಸಾರಕ್ಕೆ ಗಮನವನ್ನ ಹರಿಸಿ.
8.      ನವೆಂಬರ್                   ಈ ತಿಂಗಳು ನಿಮ್ಮ ಆರೋಗ್ಯ ಬಗ್ಗೆ ಕಾಳಜಿ ವಹಿಸಿ.
9.      ಡಿಸೆಂಬರ್                  ಈ ತಿಂಗಳು ಸಂತೋಷ ಪಡುವ ತೀಂಗಳಾಗಿರುತ್ತೆ.

ಎಚ್ಚರಿಕೆ:-
1.      ಹೊರಗಡೆ ಪ್ಲೇನ್ ಇಲ್ಲದೆ ಹೋಗುವುದನ್ನ ಎವಾಯಿಡ್ ಮಾಡಿದರೆ ಬಹಳ ಒಳ್ಳೆಯದು.
2.      ನಿಮ್ಮ ಮೊದಲರ್ಧ ಭಾಗದಲ್ಲಿ ಯಾವುದೇ ಬಿಸಿನೆಸ್ ವಿಚಾರದಲ್ಲಿ ಡಿಸಿಷನ್ ತೆಗೆದುಕೊಳ್ಳಬೇಡಿ.
ಪರಿಹಾರ :-
1.      ಹನುಮಾನ್ ಚಾಲೀಸವನ್ನ ಪ್ರತೀ ದಿನ ಓದಿ ನೋಡಿ. ಒಳ್ಳೆಯದಾಗುತ್ತೆ.
2.      ಹನುಮಾನಿಗೆ ಪಂಚ ಮಂಗಳವಾರ ಮಡಿ ಬಟ್ಟೆಯನ್ನ ಹೊದಿಸಿ ಬನ್ನಿ.
3.      ದೇವೀ ಕವಚವನ್ನ ದಿನಕ್ಕೆ ಮೂರು ಬಾರಿ ಪಠಿಸಿದರೆ ರಾಹು-ಕೇತು ನಿಮ್ಮ ರಾಶಿಯಲ್ಲಿಯೇ ಇರುವುದರಿಂದ, ನೀವು ಆ ದೋಷಗಳಿಂದ ಮುಕ್ತರಾಗುವಿರಿ.
ಉಗಾದಿ ಭವಿಷ್ಯ ೨೦೧೬ (೦೮-೦೪-೨೦೧೬) ಚೈತ್ರ ಶುಕ್ಲ ಪ್ರತಿಪತ್ ತಿಥಿ.

ಈಗ ಕನ್ಯಾ ರಾಶಿಯವರಿಗೆ ೨೦೧೬ ಉಗಾದಿ ಫಲ ಹೇಗಿದೆ ಎಂದು ನೋಡೋಣ :-
ಆಗಸ್ಟ್ ೨೨ ಮತ್ತು ಸಪ್ಟೆಂಬರ್ ೨೩ ರ ನಡುವೆ ಜನ್ಮ ತಾಳಿದವರೆಲ್ಲಾ ಈ ರಾಶಿಗೆ ಬರುತ್ತಾರೆ. ಇದು ಸೂರ್ಯ ಸಿದ್ಧಾಂತದ ಪ್ರಕಾರ. ಇದನ್ನ ವೆಸ್ಟರ್ನ್ ಸಿದ್ಧಾಂತವೆಂದು ಕರೆಯುತ್ತಾರೆ.
ಅದೇ ವೇದಿಕ್ ಸಿದ್ಧಾಂತದ ಮೇರೆಗೆ ಯಾರಜಾತಕದಲ್ಲಿ ಮಾನವನು ಜನ್ಮವೆತ್ತಿದಾವಾಗ ಚಂದ್ರನು ಕನ್ಯಾ ರಾಶಿಯಲ್ಲಿರುತ್ತಾನೋ ಅವರುಗಳನ್ನ ಕನ್ಯಾ ರಾಶಿಯವರೆಂದು ಕರೆಯುತ್ತಾರೆ.
ಈ ದುರ್ಮುಖಿ ನಾಮ ಸಂವತ್ಸರವು ಏಪ್ರಿಲ್ ೮, ಚಾಂದ್ರಮಾನ ಉಗಾದಿಯೆಂದು ಶುರುವಾಗಿ , ಮುಂದಿನ ವರುಷದ ಮಾರ್ಚ್ ೨೭ ರಂದು ಅಂತ್ಯಗೊಳ್ಳುತ್ತದೆ.
ಈ ವರುಷದಲ್ಲಿ ಕನ್ಯಾ ರಾಶಿಯವರಿಗೆ ಗುರು ಗ್ರಹವು ಆಗಸ್ಟ್ ೧೧ ರ ವರೆಗೆ ವ್ಯಯ ಸ್ಥಾನದಲ್ಲಿದ್ದು, ಆಮೇಲೆ ಜನ್ಮಕ್ಕೇ ಬಂದಿರುತ್ತೆ.
ಅದೇ ಶನಿ ಗ್ರಹವು ೩ ನೇ ಮನೆಯಲ್ಲಿದ್ದು, ಕೊನೆಯಲ್ಲಿ ೪ ಕ್ಕೆ ಹೋಗುತ್ತದೆ.
ಇನ್ನು ರಾಹು ಕೇತುಗಳು ೧೨-೬ ರ ಏಕ್ಸಿಸ್ನಲ್ಲಿದ್ದು, ಕೊನೆಯ ಭಾಗದಲ್ಲಿ ೧೧-೫ ರ ಏಕ್ಸಿಸ್ಗೆ ಹೋಗುತ್ತದೆ.
ನಿಮ್ಮ ಸಂಸಾರದ ಸದಸ್ಯರುಗಳಿಗೆ ಸಾಮಾನ್ಯ ಭವಿಷ್ಯ:-
1.       ಈ ವರ್ಷ ನಿಮ್ಮ ಸ್ಪೌಸಿನೊಡನೆ ಕೆಲವೊಂದು ವಿಚಾರದಲ್ಲಿ ಜಗಳಗಳು ಆಗುವ ಸಂದರ್ಭವು ಹೆಚ್ಚು. ಆದ್ದರಿಂದ ತಾಳ್ಮೆಯೇ ಈ ಸಂಗತಿಗೆ ಮೂಲ ಮಂತ್ರ.
2.       ಸಂಸಾರದ ಬೇರೆ ಸದಸ್ಯರುಗಳ ಜೊತೆಗೆ ಸಂಬಂಧ ಒಳ್ಳೆಯದಿರುತ್ತೆ.
ನಿಮ್ಮ ಕೇರಿಯರ್ ಬಗ್ಗೆ ಸಾಮಾನ್ಯ ಭವಿಷ್ಯ:-
1.       ಕನ್ಯಾ ರಾಶಿಯವರಿಗೆ ಒಳ್ಳೇ ಫೀಚರ್ ಕೇರಿಯರನಲ್ಲುಂಟು.
2.       ನಿಮ್ಮ ಕಾರ್ಯಕ್ಷೇತ್ರದಲ್ಲಿ ವಾದಗಳಿಗೆಹೋಗದಿರಿ.
3.       ಜೂನ್ ಮತ್ತು ಜುಲೈ ನಿಮಗೆ ಹೊಸ ಪ್ರೊಜೆಕ್ಟ್ಸಗಳಿಗೆ ಹಾಗೂ ವೆಂಚರುಗಳಿಗೆ ಒಳ್ಳೆಯ ಸಮಯ.
ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಸಾಮಾನ್ಯ ಜ್ಯೋತಿಷ್ಯ:-
1.       ಗ್ರಹಗಳ ಸ್ಥಿತಿ ಪೂರಕವಾಗಿದೆ.
2.       ಮೋಟಿವೇಷನ್ ಅತ್ಯಗತ್ಯ.
3.       ಮಧ್ಯಮಾರ್ಧದಲ್ಲಿ ನಿಮ್ಮ ಗುರಿಗೆ (ಗೋಲ್) ಫೋಕಸ್ ಆಗಿ.
ನಿಮ್ಮ ಲವ್ ವಿಚಾರದಲ್ಲಿ ಸಾಮಾನ್ಯ ಭವಿಷ್ಯ:-
·         ಈ ವರ್ಷ ನಿಮ್ಮ ವರ್ಷ.
·         ವರ್ಷಾಂತ್ಯದಲ್ಲಿ ಏನಾದರೂ ತೊಂದರೆಗಳು ಉಧ್ಬವಿಸಬಹುದು. ಆದರೆ ಅದರಿಂದ ಹೊರಗೆ ಖಂಡಿತ ಬರುತ್ತೀರ.
ನಿಮ್ಮ ಹಣಕಾಸಿನ ವಿಚಾರದಲ್ಲಿ ಸಾಮಾನ್ಯ ಭವಿಷ್ಯ:-
1.      ನಿಮ್ಮ ಆಯ ವ್ಯಯದಲ್ಲಿ ಕಂಟ್ರೋಲ್ ಇರಲಿ.
2.      ಈ ರೀತಿ ಇದ್ದಲ್ಲಿ ನಿಮ್ಮ ಸಾಲವನ್ನ ತೀರಿಸಿ, ಸೇವಿಂಗ್ಸ್ ಮಾಡುತ್ತೀರ.
3.       ನಿಮ್ಮ ಸೇವಿಂಗ್ಸ್ನ ಬಗ್ಗೆ ಕಾಳಜಿಯಿರಲಿ.
ನಿಮ್ಮ ಆರೋಗ್ಯದ ಬಗ್ಗೆ ಸಾಮಾನ್ಯ ಭವಿಷ್ಯ :-
1.      ನೀವು ಒಳ್ಳೇ ಆರೋಗ್ಯವನ್ನ ಕಾಪಾಡಿಕೊಂಡು ಬರುತ್ತೀರ.
2.      ನಿಮ್ಮ ವೃತ್ತಿಯಲ್ಲಿ ಒತ್ತಡವನ್ನ ಒದ್ದೋಡಿಸಿ.
ತಿಂಗಳ ಭವಿಷ್ಯ:-
1.      ಏಪ್ರಿಲ್                                    ಲವ ಏಂಡ್ ರೋಮೇನ್ಸಿನ ತಿಂಗಳು.
2.                                          ಅಂತೆಯೇ ಬಿಸಿನೆಸ್ಸ್ ಮತ್ತು ಫನೇನ್ಸಿಗೂ ಇದು ಒಳ್ಳೆಯ ತಿಂಗಳು.
3.      ಮೇ                              ಕೇರಿಯರಿಗೆ ಇದು ಉತ್ತಮ ತಿಂಗಳು.
4.      ಜೂನ್                         ಕೆಲಸದ ಪ್ರಯುಕ್ತ ಪ್ರಯಾಣ
5.      ಜುಲೈ                           ವಿದ್ಯಾಭ್ಯಾಸ ಹಾಗೂ ನಿಮ್ಮ ಕೇರಿಯರಿಗೆ ಉತ್ತಮ ತಿಂಗಳು.
6.      ಆಗಸ್ಟ್                          ಸಂಸಾರದ ವಿಚಾರವಾಗಿ ಕೇರನ್ನ ತೆಗೆದುಕೊಳ್ಳಿ.
7.      ಸಪ್ಟೆಂಬರ್                  ಫೈನ್ನೇನ್ಸಿನಲ್ಲಿ ಪ್ರೋಗ್ರೆಸ್ ಹಾಗೂ ಲವ್ ಲೈಫ಼ನಲ್ಲಿ ಕೂಡ.
8.      ಆಕ್ಟೋಬರ್               ಈ ತಿಂಗಳೂ ನಿಮ್ಮ ಫೈನೇನ್ಸಿನಲ್ಲಿ ವೃಧ್ಧಿ.
9.      ನವೆಂಬರ್                   ನಿಮ್ಮ ಕೆಲಸವು ಅನಗತ್ಯವಾಗಿ ಎಳೆಯುತ್ತದೆ.
10. ಡಿಸೆಂಬರ್                  ನಿಮ್ಮ ಆರೋಗ್ಯ ಮತ್ತು ಸಂಸಾರಕ್ಕೆ ಮೀಸಲಿಡುವಂತಹ ಸಮಯ.


ಎಚ್ಚರಿಕೆ:-
1.      ಅನಗತ್ಯ ಖರ್ಚು ವೆಚ್ಚಗಳನ್ನ ಮಾಡದಿರಿ.
2.      ಅತಿ ದೊಡ್ಡ ಇನ್ವೆಸ್ಟ್ಮೆಂಟ್ಸ್ಗಳನ್ನ ಮಾಡದಿರಿ.
ಪರಿಹಾರ :-
1.       ಸೂರ್ಯದೇವನಿಗೆ ಅರ್ಘ್ಯವನ್ನ ದಿನಾ ಕೊಡಲು ಮರೆಯಬೇಡಿ.
2.       ವಿಷ್ಣು ಸಹಸ್ರನಾಮ ಸ್ತೋತ್ರವನ್ನ ದಿನಾ ಪಠಿಸಿ.
3.       ಕನಕಧಾರಾ ಸ್ತೋತ್ರವನ್ನ ದಿನಾ ಪಠಿಸಿ.ಇದರಿಂದ ಶುಕ್ರ ಖುಷ್.
4.       ದುರ್ಗಾ ಹೋಮವನ್ನ ಕೆಟ್ಟದ್ದನ್ನ ನಿವಾರಿಸಲೋಸುಗ ಮಾಡಿರಿ.
5.       ಗುರುವಾರ ಗುರುವಾರ ಉಪವಾಸವನ್ನ ಆಚರಿಸಿ ನಿಮ್ಮ ತೊಂದರೆಗಳನ್ನ ನಿವಾರಣೆ ಮಾಡಿಕೊಳ್ಳಿ.






ಪಾರಂಪಳ್ಳಿ ಸುರೇಂದ್ರ ಉಪಾಧ್ಯ