Friday, 29 April 2016

ಉಗಾದಿ ಭವಿಷ್ಯ ೨೦೧೬ (೦೮-೦೪-೨೦೧೬) ಚೈತ್ರ ಶುಕ್ಲ ಪ್ರತಿಪತ್ ತಿಥಿ (ಭಾಗ-೨-ತುಲಾದಿಂದ ಮೀನದವರೆಗೆ).



ಈಗ ತುಲಾ ರಾಶಿಯವರಿಗೆ ೨೦೧೬ ಉಗಾದಿ ಫಲ ಹೇಗಿದೆ ಎಂದು ನೋಡೋಣ :-

ಸಪ್ಟೆಂಬರ್ ೨೪ ರಿಂದ ಆಕ್ಟೋಬರ್ ೨೨ ರವರೆಗೆ ಯಾರು ಜನ್ಮವನ್ನ ಇತ್ತಿದ್ದಾರೋ, ಅವರುಗಳೆಲ್ಲಾ ಸೂರ್ಯ ಸಿದ್ಧಾಂತದ ಮೇರೆಗೆ (ವೆಸ್ಟರ್ನ್ ಆಸ್ಟ್ರೋಲಜಿ) ಈ ತುಲಾ ರಾಶಿಗೆ ಬರುತ್ತಾರೆ.
ಅದೇ ವೇದಿಕ್ ಆಸ್ಟ್ರೋಲಜಿಯ ಪ್ರಕಾರ, ಮಾನವನು ಜನ್ಮವನ್ನ ಎತ್ತಿದಾವಾಗ, ಚಂದ್ರನು ತುಲಾದಲ್ಲಿದ್ದಲ್ಲಿ, ಅವರುಗಳು ತುಲಾರಾಶಿಗೆ ಬರುತ್ತಾರೆ.
ಆದ್ದರಿಂದ ಈ ರಾಶಿಯವರಿಗೆ ಗುರು ಗ್ರಹವು ೧೧ ಮತ್ತು ೧೨ ನೇ ಮನೆಯವನಾಗಿರುತ್ತಾನೆ ಈ ವರ್ಷ ಪೂರ್ತಿ.
ಅದೇ ಶನಿ ಮಾಹಾರಾಜನು ಫೆಬ್ರುವರಿ ೨೦೧೭ ರವರೆಗೆ ೨ ಅಂದರೆ ಕುಟುಂಬ ಹಾಗೂ ಧನ ಸ್ಥಾನದಲ್ಲಿದ್ದು, ಆ ಮೇಲೆ  ೩ ನೇ ಮನೆಗೆ ಹೋಗುತ್ತಾನೆ.
ರಾಹು –ಕೇತು ಗ್ರಹವು ೧೧-೫ ರ ಏಕ್ಸಿಸ್ನಲ್ಲಿದ್ದರೆ , ಆಮೇಲೆ ೧೦-೪ ರ ಏಕ್ಸಿಸ್ಗೆ ಹೋಗುತ್ತಾರೆ.
ನಿಮ್ಮ ಸಂಸಾರದ ಸದಸ್ಯರುಗಳಿಗೆ ಸಾಮಾನ್ಯ ಭವಿಷ್ಯ:-
1.       ಈ ವರ್ಷ ನಿಮ್ಮದ್ದೇ ವರ್ಷ. ನೀವು, ನಿಮ್ಮ ಸಂಸಾರದ ಸದಸ್ಯರುಗಳ ಹತ್ತಿರ ಬಹಳ ಹತ್ತಿರದವರಾಗುತ್ತೀರ.
2.       ಆದರೆ ತಂದೆಯವರ ಹತ್ತಿರ ನಿಮ್ಮ ಕೆಲವೊಂದು ವಿಷಯಗಳಲ್ಲಿ ಮನಸ್ಥಾಪವುಂಟು. ಆದರೆ ಅದೇ ಬೇರೆ ಸದಸ್ಯರುಗಳ ಹತ್ತಿರ ಬಹಳ ಒಳ್ಳೆಯ ಸಂಬಂಧವನ್ನ ಬೆಳೆಸುತ್ತಿರುವಿರಿ.
ನಿಮ್ಮ ಕೇರಿಯರ್ ಬಗ್ಗೆ ಸಾಮಾನ್ಯ ಭವಿಷ್ಯ:-
1.       ನಿಮ್ಮ ಸ್ಥಾನವನ್ನ ಗಟ್ಟಿಯಾಗಿರಿಸಲು, ನೀವು ಈ ವರ್ಷ ಬಹಳ ಅಂದರೆ ಬಹಳ ಎಗ್ರೆಸ್ಸಿವ್ ಸ್ಟೆಪ್ಸ್ ತೆಗೆದುಕೊಳ್ಳಬಹುದು.
2.       ನಿಮ್ಮ ಟೀಮ್ ಸದಸ್ಯರುಗಳಿಂದ ನಿಮಗೆ ಸಂಪೂರ್ಣ ಸಹಾಯ ಸಿಗುವುದರಿಂದ ನೀವೊಬ್ಬರು ಬಹಳ ಎತ್ತರಕ್ಕೆ ಹೋಗುತ್ತೀರ. ಅಹಂಕಾರ ಮಾತ್ರ ಬಾರದಿರಲಿ.

ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಸಾಮಾನ್ಯ ಜ್ಯೋತಿಷ್ಯ:-
1.       ವರ್ಷದ ಪ್ರಥಮದಲ್ಲಿ ನಿಮ್ಮ ವಿದ್ಯಾಭಾಸಕ್ಕೆ ಯಾವ ತೊಂದರೆಗಳೂ ಇಲ್ಲ.
2.       ನಿಮಗೆ ಬೇಕಾಗುವ ಫಲಗಳು ದೊರಕಬೇಕೆಂದಿದ್ದರೆ, ಬಹಳಸ್ಟು ಕಠಿಣ ಪರಿಶ್ರಮವನ್ನ ಮಾಡಬೇಕಾಗುತ್ತದೆ.
3.       ಆದರೆ ಎರಡನೇ ಅರ್ಧ ಭಾಗದಲ್ಲಿ ಕೆಲವೊಂದು ಇಸ್ಯೂಸ್ಗಳು ಇದ್ದಲ್ಲಿ, ಪ್ರಥಮಾರ್ಧದಲ್ಲಿ ನಿಮ್ಮ ಪರಿಷ್ರಮ ಇಲ್ಲಿ ಕೆಲಸಕ್ಕೆ ಬಂದು, ನೀವು ಆ ಕಸ್ಟಗಳಿಂದ ಪಾರಾಗುವಿರಿ.
ನಿಮ್ಮ ಲವ್ ವಿಚಾರದಲ್ಲಿ ಸಾಮಾನ್ಯ ಭವಿಷ್ಯ:-
1.      ನಿಮ್ಮ ಲವ್ ಏಂಡ್ ರೊಮೇನ್ಸಿಗೆ ಇದು ಒಳ್ಳೆಯ ಕಾಲ.
2.      ಇಸ್ಟರವರೆಗೆ ಒಂದು ವೇಳೆ ತೊಂದರೆಗಳನ್ನ ಅನುಭವಿಸಿದ್ದಲ್ಲಿ, ಈವಾಗ ಅದು ಪರಿಹಾರವಾಗುತ್ತೆ.
3.      ನಿಮ್ಮ ಪಾರ್ಟ್ನರ್ ಜೊತೆಯಲ್ಲಿ ಒಳ್ಳೆಯದಾಗಿರಿ.
ನಿಮ್ಮ ಹಣಕಾಸಿನ ವಿಚಾರದಲ್ಲಿ ಸಾಮಾನ್ಯ ಭವಿಷ್ಯ:-
1.      ನಿಮ್ಮ ಕಠಿಣ ಪರಿಷ್ರಮದಿಂದ ಸಂಪಾದನೆಯನ್ನ ಸುಮ್ಮನೇ ಹಾಳು ಮಾಡದಿರಿ.
2.      ಅದಕ್ಕಾಗಿ ನಿಮ್ಮ ಡಿಸಿಷನ್ ಬಹಳ ಒಳ್ಳೆಯದಿರಬೇಕು.
3.      ಬೇರವರನ್ನ ನಂಬಲು ನೀವು ಕಲಿಯಬೇಕು. ಆವಾಗಲೇ ನಿಮಗೆ ಗೆಲುವು ಖಂಡಿತ.
ನಿಮ್ಮ ಆರೋಗ್ಯದ ಬಗ್ಗೆ ಸಾಮಾನ್ಯ ಭವಿಷ್ಯ :-
1.      ಟೆನ್ಷನ್ ಎವೋಯಿಡ್ ಮಾಡಿ. ಇಲ್ಲಾಂದ್ರೆ ನಿಮ್ಮ ಆರೋಗ್ಯ ಹದಗೆಡಬಹುದು.
2.      ಯಾವುದಾದರೂ ಇಸ್ಯೂಸ್ ಇದ್ದಲ್ಲಿ ಅದು ಮನೆಯಾಗಿರಬಹುದು ಇಲ್ಲಾ ಆಫೀಸ್ ಆಗಿರಬಹುದು. ಅದನ್ನ ಒಳ್ಳೇ ರೀತಿಯಲ್ಲಿ ಹೇಂಡಲ್ ಮಾಡುವುದನ್ನ ಕಲಿಯಿರಿ.
3.      ನಿಮ್ಮ ಗಂಟಲು ಮತ್ತು ಜೀರ್ಣತೆಯ ಬಗ್ಗೆ ಕಾಳಜಿ ವಹಿಸಿದರೆ, ನಿಮಗೆ ಯಾವ ದೊಡ್ಡ ಕಸ್ಟವೂ ಒದಗಿ ಬರುವುದಿಲ್ಲ.
ತಿಂಗಳ ಭವಿಷ್ಯ:-
1.      ಏಪ್ರಿಲ್                        ಮನೆ ಮತ್ತು ಆಫೀಸನ್ನ ಬೇಲೆನ್ಸ್ ಮಾಡುವಂತಹ ತಿಂಗಳು.
2.      ಮೇ                  ಯಾವುದೇ ಋಣಾತ್ಮಕ ವಿಚಾರಗಳಿದ್ದಲ್ಲಿ, ಅದನ್ನ ಬಿಟ್ಟುಬಿಡಿ.
3.      ಜೂನ್             ನಿಮ್ಮ ಭವಿಷ್ಯಕ್ಕೆ ಇನ್ವೆಸ್ಟ್ಮೆಂಟ್ಸ್ ಮಾಡಿ.
4.      ಜುಲೈ               ಕೆಲಸ ಸಂಬಂಧ ಕಮಿಟ್ಮೆಂಟ್ಸ್ಗಳನ್ನ ಮೊದಲು ಮಾಡಿ.
5.      ಆಗಸ್ಟ್              ನೀವು ನಿಮ್ಮ ಲವ್ ಲೈಫನ್ನ ಎನ್ಜೋಯ್ ಮಾಡುವಂತಹ ತಿಂಗಳು.
6.      ಸಪ್ಟೆಂಬರ್      ಈ ತಿಂಗಳು ನಿಮ್ಮ ಸಂಸಾರದ ಸದಸ್ಯರುಗಳ ಸಮಯ.
7.      ಆಕ್ಟೋಬರ್   ಈ ತಿಂಗಳು ಬಹು ದೊಡ್ಡ ಆಸ್ಥಿ ಮತ್ತು ವೆಲ್ತನ್ನ ಪಡೆಯುತ್ತೀರ / ಮಾಡುತ್ತೀರ.
8.      ನವೆಂಬರ್       ಈ ತಿಂಗಳು ಹಣ ಸಂಬಂಧಿತ ಅದೃಸ್ಟ ನಿಮಗೆ ಒಲಿಯಲಿದೆ.
9.      ಡಿಸೆಂಬರ್      ಈ ತಿಂಗಳು ಏನಾದರೂ ಹೊಸ ಸ್ಕಿಲ್ಸ್ ಕಲಿಯುವಂತಹ ತಿಂಗಳು.


ಎಚ್ಚರಿಕೆ:-
1.      ಚಂದ್ರನು ವೃಷಭ, ಸಿಂಹ, ವೃಸ್ಚಿಕ ಹಾಗೂ ಕುಂಭದಲ್ಲಿರುವಾಗ ಯಾವುದೇ ದೊಡ್ಡ ಮಟ್ಟದ ಡಿಸಿಷನ್ ತೆಗೆದುಕೊಳ್ಳದಿರಿ.
2.      ದೂರ ಪ್ರಯಾಣವನ್ನ ಆದಸ್ಟು ಎವೋಯಿಡ್ ಮಾಡಿ.
ಪರಿಹಾರ :-
1.       ಮುತ್ತು ಮತ್ತು ಮಾಣಿಕ್ಯ ನಿಮಗೆ ಬಹಳ ಒಳ್ಳೆಯ ಲಕ್ ತರಿಸುತ್ತೆ.
2.      ಮಂಗಳವಾರ ಮಂಗಳವಾರ ಹನುಮಾನ್ ಮಂದಿರಕ್ಕೆ ಭೇಟಿ ಕೊಡಿ. ಅಲ್ಲಿ ಹನುಮಾನ್ ಚಾಲೀಸವನ್ನ ಓದಿ.

ಉಗಾದಿ ಭವಿಷ್ಯ ೨೦೧೬ (೦೮-೦೪-೨೦೧೬) ಚೈತ್ರ ಶುಕ್ಲ ಪ್ರತಿಪತ್ ತಿಥಿ.
ಈಗ ವೃಸ್ಚಿಕ ರಾಶಿಯವರಿಗೆ ೨೦೧೬ ಉಗಾದಿ ಫಲ ಹೇಗಿದೆ ಎಂದು ನೋಡೋಣ :-
ಸೂರ್ಯ ಸಿದ್ಧಾಂತದ ಪ್ರಕಾರ, ಯಾರು ಆಕ್ಟೋಬರ್ ೨೩ ಹಾಗೂ ನವೆಂಬರ್ ೨೨ ರ ನಡುವೆ ಜನಿಸಿದ್ದಾರೊ, ಅವರುಗಳು ಈ ರಾಶಿಗೆ ಬರುತ್ತಾರೆ.
ಅದೇ ನಮ್ಮ ವೇದಿಕ್ ಆಸ್ಟ್ರೋಲಜಿಯ ಪ್ರಕಾರ ಮಾನವನು ಜನ್ಮವನ್ನ ಎತ್ತಿದಾವಾಗ, ಚಂದ್ರನು  ವೃಸ್ಚಿಕ ರಾಶಿಯಲ್ಲಿದ್ದಲ್ಲಿ, ಅವರದ್ದು ಅದೇ ಜನ್ಮ ರಾಶಿಯಾಗುತ್ತೆ.
ಇನ್ನು ದುರ್ಮುಖಿನಾಮ ಸಂವತ್ಸರವು ಇದೇ ಚಾಂದ್ರಮಾನ ಉಗಾದಿಯ ದಿನ ಅಂದರೆ ಏಪ್ರಿಲ್ ೮ ರಂದು ಶುರುವಾಗಿ, ಬರುವ ವರ್ಷ ಮಾರ್ಚ್೨೭, ೨೦೧೭ರಂದು ಅಂತ್ಯಗೊಳ್ಳುತ್ತದೆ.
ಇನ್ನು ಗುರು ಗ್ರಹವು  ವೃಸ್ಚಿಕ ರಾಶಿಯಿಂದ ಮೊದಲರ್ಧ ಅಂದರೆ ಆಗಸ್ಟ ೧೧ ರ ವರೆಗೆ ೧೦ ನೇ ಮನೆಯಲ್ಲಿದ್ದರೆ, ತದನಂತರ ಅದು ೧೧ ನೇ ಮನೆಗೆ ಹೋಗುತ್ತದೆ.
ಇನ್ನು ಶನಿಗ್ರಹವು ರಾಶಿಯಲ್ಲಿಯೇ ಇದ್ದು ಆಮೇಲೆ ಫೆಬ್ರುವರಿ ೨೦೧೭ರ ನಂತರ ಅದು ೨ ನೇ ಮನೆಗೆ ಹೋಗುತ್ತಾನೆ/
ಇನ್ನು ರಾಹು-ಕೇತು ಗ್ರಹಗಳು ೧೦-೪ ರ ಏಕ್ಸಿಸ್ನಲ್ಲಿದ್ದು, ತದನಂತರ ೯-೩ ರ ಏಕ್ಸಿಸ್ನಲ್ಲಿರುತ್ತಾರೆ.
ನಿಮ್ಮ ಸಂಸಾರದ ಸದಸ್ಯರುಗಳಿಗೆ ಸಾಮಾನ್ಯ ಭವಿಷ್ಯ:-
1.       ನಿಮ್ಮ ಸಂಸಾರದಲ್ಲಿ ಬಹಳ ಅಲ್ಲೋಲ ಕಲ್ಲೋಲವನ್ನ ನೋಡುವಿರಿ. ಆದರೆ ಅದೇ ೨ನೇ ಅರ್ಧ ಭಾಗದಲ್ಲಿ ಎಲ್ಲಾ ಸರಿ ಹೋಗುವುದು. ಇದಕ್ಕೆ ಕಾರಣ ಗುರುವಿನೊಡನೆ ರಾಹು ಇದ್ದು, ಗುರು ಚಾಂಡಾಲ ಯೋಗವನ್ನುಂಟು ಮಾಡುತ್ತಾನೆ.
2.       ಅದೇ ನಿಮ್ಮ ಸಂಬಂದವು ನಿಮ್ಮ ತಂದೆ –ತಾಯಿಯ ಹತ್ತಿರವೂ ಸರಿ ಇರದು. ಇದಕ್ಕಾಗಿ ನೀವು ಸರಿಯಾಗಿ ಕೆಲಸವನ್ನ ಮಾಡಬೇಕು. ಇದಕ್ಕೆ ಕಾರಣ ಕೆಲವರು ೧೦ ನೇ ಮನೆಯನ್ನ ಪಿತೃಕಾರಕ ಎಂದು ತಿಳಿದಿರುವುದರಿಂದ. ಆದರೆ ನನ್ನ ಮಟ್ಟಿಗೆ ಹೇಳುವುದಾದರೆ, ತಂದೆಯ ಮನೆ ೯ ನೆಯ ಮನೆಯಾಗಿರುತ್ತೆ. ಇಲ್ಲಿ ಮೋಕ್ಷಕಾರಕ ಕೇತು ೪ ನೇ ಮನೆಯಲ್ಲಿರುವ ಕಾರಣ ನಿಮ್ಮ ತಾಯಿ ಅನಾರೋಗ್ಯದಿಂದ ನರಳುತ್ತಿದ್ದಲ್ಲಿ, ತಾ.೩೧-೦೧-೨೦೧೬ ರ ನಂತರ ಕೇತು ಗ್ರಹವು ಕುಂಭ ರಾಶಿಗೆ ಸ್ತಾನಾಂತರವಾದ ಕಾರಣ, ಅದು ನಿಮಗೆ ಸುಖ ಮತ್ತು ತಾಯಿಯ ಮನೆಯಾದ ಕಾರಣ, ನಿಮ್ಮ ತಾಯಿಯು ಮೋಕ್ಷಗೈಯಲು ಸಾಧ್ಯ!
3.       ಆದರೆ ನಿಮ್ಮ ಸ್ಪೌಸ್ ಬಹಳ ಮಟ್ಟಿಗೆ ನಿಮ್ಮನ್ನ ಅರ್ಥವನ್ನ ಮಾಡಿಕೊಂಡು ನಿಮಗೆ ಸಹಾಯವನ್ನ ಮಾಡುತ್ತಾರೆ.
ನಿಮ್ಮ ಕೇರಿಯರ್ ಬಗ್ಗೆ ಸಾಮಾನ್ಯ ಭವಿಷ್ಯ:-
1.       ನೀವುಗಳು ನಿಮ್ಮ ಟೀಮಿನೊಂದಿಗೆ ಕೂತು ಬಹಳಸ್ಟು ಕೆಲಸವನ್ನ ಮಾಡಬೇಕು.
2.       ಅವರುಗಳ ಮೇಲೆ ನಿಮ್ಮ ಐಡಿಯಾಸನ್ನ ಸುಮ್ಮನೆ ಹೇರಬೇಡಿ.
3.       ನೀವು ನಿಮ್ಮಲ್ಲಿಯ ಕಲೆಯನ್ನ ( ಸ್ಕಿಲ್)  ಹೇಗೆ ಹೆಚ್ಚಿಗೆ ಮಾಡಬೇಕೆನ್ನುವ ಬಗ್ಗೆ ಯೋಚನೆಯನ್ನ ಮಾಡಬೇಕು.
4.       ಆದರೆ ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಬೆಲೆ ಈ ವರ್ಷ ಸಿಕ್ಕೀತು.
ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಸಾಮಾನ್ಯ ಜ್ಯೋತಿಷ್ಯ:-
1.       ಬಹಳಸ್ಟು ನಿಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಗಳುಂಟು. ಬಹಳ ಪರಿಷ್ರಮವನ್ನ ಪಡಬೇಕಾದೀತು.
2.       ಯಾವಾಗಲೂ ಗುರಿಯನ್ನ ಮನಸ್ಸಿನಲ್ಲಿಟ್ಟು ಕೆಲಸವನ್ನ ಮಾಡಲು ಕಲಿಯಿರಿ.
ನಿಮ್ಮ ಲವ್ ವಿಚಾರದಲ್ಲಿ ಸಾಮಾನ್ಯ ಭವಿಷ್ಯ:-
1.      ಈ ವರ್ಷ ನಿಮ್ಮ ಈ ವಿಚಾರಗಳಿಗೆ ನಿಮ್ಮದ್ದೇ ವರ್ಷವಾಗಿರುತ್ತೆ.
2.      ಇದಕ್ಕೆ ಕಾರಣ ನೀವು ನಿಮ್ಮ ಸ್ಪೌಸಿನ ಬಗ್ಗೆ  ಒಳ್ಳೇದಾಗಿ ತಿಳಿದುಕೊಂಡಿದ್ದೀರ.
3.      ಫೆಬ್ರುವರಿ ಮತ್ತು ಮೇ  ನಡುವೆ ಒಂದು ಬಹು ದೊಡ್ಡ ವಿಚಾರ/ಇವೆಂಟ್ಸ್ ಜರುಗಲಿದೆ. ಆದರೆ ಬಹಳ ಜಾಗರೂಕರಾಗಿರಿ.
ನಿಮ್ಮ ಹಣಕಾಸಿನ ವಿಚಾರದಲ್ಲಿ ಸಾಮಾನ್ಯ ಭವಿಷ್ಯ:-
1.      ನೀವು ಫ್ಫೈನಾನ್ಸಿಯಲ್ ವಿಚಾರವಾಗಿ ನಿಸ್ಚಿಂತೆಯಿಂದ ಇರಿ.
2.      ಎಲ್ಲಾ ಕಸ್ಟಗಳನ್ನ ಒಳ್ಳೇ ಹಣದ ಪ್ರಭಾವದಿಂದಾಗಿ ನೀವು ಒಳ್ಳೇ ರೀತಿಯಲ್ಲಿ ಪರಿಹರಿಸುವಿರಿ.
3.      ನಿಮ್ಮ ಸಂಸಾರದಲ್ಲೊಂದು ಒಳ್ಳೆಯ ಕೆಲಸಕ್ಕೂ ನೀವು ಹಣ ವನ್ನ ಖರ್ಚು ಮಾಡುವಿರಿ.
ನಿಮ್ಮ ಆರೋಗ್ಯದ ಬಗ್ಗೆ ಸಾಮಾನ್ಯ ಭವಿಷ್ಯ :-
1.      ನಿಮ್ಮ ಆರೋಗ್ಯ ಸರ್ವೇ ಸಾಧಾರಣ ಸುಧಾರಿಸಲಿವೆ. ಆದರೆ ಇದಕ್ಕೆ, ನಿಮ್ಮ ಸ್ಟ್ರೆಸ್ ಲವೆಲ್ಲನ್ನ ಕಡಿಮೆ ಮಾಡಿಕೊಳ್ಳಬೇಕು.
2.      ನಿಮ್ಮ ತಲೆಯನ್ನ ಮಾತ್ರ ನಿಮ್ಮ ಕೈಯಲ್ಲೇ ಇಟ್ಟುಕೊಳ್ಳೀ. ಎಲ್ಲಾ ಸರಿ ಹೋಗುತ್ತೆ. ಬೇರವರಿಗೆ ಮಾತ್ರ ನಿಮ್ಮ ತಲೆಯನ್ನ ಕಡವನ್ನ ಕೊಡಲು ಹೋಗದಿರಿ. ಅದು ನಿಮಗೇ ತೊಂದರೆ.
ತಿಂಗಳ ಭವಿಷ್ಯ:-
1.      ಏಪ್ರಿಲ್                        ಈ ತಿಂಗಳು ಸಂಸಾರದೊಂದಿಗೆ ಸಮಯವನ್ನ ಕಳೆಯಲು ತಕ್ಕದ್ದು.
2.      ಮೇ                  ಈ ತಿಂಗಳು ನಿಮಗೆ ಹಣದ ಸುರಿಮಳೆ.
3.      ಜೂನ್             ಈ ತಿಂಗಳು ಬಿಸಿನೆಸ್ಸಿಗೆ ಒಂದು ಸಮ್ಮಿಶ್ರ ತಿಂಗಳು.
4.      ಜುಲೈ               ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ.
5.      ಆಗಸ್ಟ್              ನಿಮ್ಮ ವೃತ್ತಿಯಲ್ಲಿ ನಿಮಗೆ ಸುಖ ಸಂತೋಷ ಸಿಗುತ್ತೆ.
6.      ಸಪ್ಟೆಂಬರ್      ನಿಮ್ಮ ಜೀವನದಲ್ಲಿ +ವ್ ಬದಲಾವಣೆ
7.      ಆಕ್ಟೋಬರ್   ನಿಮ್ಮ ಗುರಿಯನ್ನ ಮುಟ್ಟಲು ಒಳ್ಳೇ ಸುವರ್ಣ ಅವಕಾಷ.
8.      ನವೆಂಬರ್       ಈ ತಿಂಗಳು ನಿಮ್ಮ ಕಠಿಣ ಪರಿಶ್ರಮಕ್ಕೆ ಸಂತೋಷ ಪಡುವ ಸಮಯ.
9.      ಡಿಸೆಂಬರ್      ಆರೋಗ್ಯಕ್ಕೂ ಸಂಸಾರಕ್ಕೂ ಇದು ಸ್ಟೇಬಲ್ ತಿಂಗಳು.
ಎಚ್ಚರಿಕೆ:-
1.      ಅನಗತ್ಯ ಪ್ರಯಾನವನ್ನ ಪೋಸ್ಟ್ಪೋನೆ ಮಾಡಿ.
2.      ದೊಡ್ಡ ಇನ್ವೆಸ್ಟ್ಮೆಂಟ್ಸನ್ನ ಮಾಡುವಾಗ ದುಬಾರ ಯೋಚಿಸಿ.
ಪರಿಹಾರ :-
1.      ನಿಮ್ಮ ಸುತ್ತ ಮುತ್ತ ಕ್ಲೀನ್ ಇಡಿ. +ವ್ ಎನರ್ಜೀ ಫಾಲೋ ಆಗುತ್ತೆ.
2.      ಹನುಮಾನ್ ಚಾಲೀಸ ಪ್ರತಿ ದಿನ ಓದಲು ಮರೆಯದಿರಿ. ಕಾರಣ ನೀವು ಸಾಡೇ ಸಾತಿಯಲ್ಲಿ ಸಾಯುತ್ತಿದ್ದೀರಿ! ಜೋಕೆ. ನಿಮ್ಮ ಮನೆಯಲ್ಲಿ ಯಾವುದಾದರೂ ಸಾವು ಆಗಿರಬಹುದು. ಕಾರಣ ಕೇತು ಗ್ರಹವು ೪ ನೇ ಮನೆಗೆ ಜನುವರಿ ೩೧, ೨೦೧೬ ರಿಂದಬಂದಿರುವುದು.
3.      ನೀವು ಹೊಟ್ಟೇ ಕಿಚ್ಚನ್ನ ಪಡುವುದು ಬಿಟ್ಟುಬಿಡಿ. ಅದು ಒಳ್ಳೆಯದಲ್ಲ. ತಪ್ಪು ನಿಮ್ಮದಲ್ಲ. ನಿಮ್ಮದ್ದು ಏಡಿ ಛಿಹ್ನೆ! ಕುಟುಕೀ ಕುಟುಕೀ ಬೇರವರನ್ನ ಸಾಯಿಸುತ್ತೀರ. ಅದಕ್ಕೇ ಈ ಸಾಡೇ ಸಾತಿಯಲ್ಲಿ ನೀವು ಸಾಯುತಿದ್ದೀರ!.
ಉಗಾದಿ ಭವಿಷ್ಯ ೨೦೧೬ (೦೮-೦೪-೨೦೧೬) ಚೈತ್ರ ಶುಕ್ಲ ಪ್ರತಿಪತ್ ತಿಥಿ.
ಈಗ ಧನೂರ್ ರಾಶಿಯವರಿಗೆ ೨೦೧೬ ಉಗಾದಿ ಫಲ ಹೇಗಿದೆ ಎಂದು ನೋಡೋಣ :-
ನವೆಂಬರ್ ೨೩ ಹಾಗೂ ಡಿಸೆಂಬರ್ ೨೨ ರ ಮಧ್ಯ ಯಾರ್ಯಾರು ಜನ್ಮವನ್ನ ಎತ್ತಿದ್ದಾರೋ, ಅವರೆಲ್ಲಾ ವೆಸ್ಟರ್ನ್ ಆಸ್ಟ್ರೋಲಜಿಯ ಪ್ರಾಕಾರ, ಅಂದರೆ ಸೂರ್ಯ ಸಿದ್ಧಾಂತದ ಮೇರೆಗೆ ಧನೂರ್ ರಾಶಿಗೆ ಬರುತ್ತಾರೆ.
ಅದೇ ನಮ್ಮ ವೇದಿಕ್ ಜ್ಯೋತಿಷ್ಯದ ಪ್ರಕಾರ, ನಾವುಗಳು ಚಂದ್ರ ಸಿಧ್ಧಾಂತವನ್ನ ಅನುಸರಿಸುವವರು. ಯಾರದ್ದು ಧನೂರ್ ರಾಶಿಯಲ್ಲಿ ಚಂದ್ರನಿರುತ್ತಾನೋ ಅವರೆಲ್ಲಾ ಧನೂರ್ ರಾಶಿಯ ಫಲಗಳನ್ನ ನೋಡ ತಕ್ಕದ್ದು.
ಇವರಿಗೆ ಗುರು ಗ್ರಹವು ಭಾಗ್ಯದಲ್ಲಿ ಬರುತ್ತಾನೆ. ಅದೇ ಆ, ಆಗಸ್ಟರ ನಂತರ ಕರ್ಮಕ್ಕೆ ಹೋಗುತ್ತಾನೆ. ಕಾರಣ ಗುರು ಗ್ರಹವು ಕನ್ಯಾ ರಾಶಿಗೆ ಹೋಗುತ್ತಾನೆ.
ಶನಿ ಗ್ರಹವು ವ್ಯಯ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಅಂದರೆ ಫೆಬ್ರುವರಿ, ೨೦೧೭ ರಂದು ನಿಮ್ಮ ರಾಶಿಗೇ ಶನಿ ಮಹಾರಾಜನು ಪ್ರವೇಶವನ್ನ ಮಾಡುವನು.
ಇನ್ನು ರಾಹು –ಕೇತು ಗ್ರಹಗಳು ೯-೩ ರ ಏಕ್ಸಿಸ್ನಲ್ಲಿದ್ದರೆ ಅವುಗಳೂ ಕೂಡ ಮುಂದೆ ೮-೨ ರ ಏಕ್ಸಿಗೆ ಬರುತ್ತವೆ.
ನಿಮ್ಮ ಸಂಸಾರದ ಸದಸ್ಯರುಗಳಿಗೆ ಸಾಮಾನ್ಯ ಭವಿಷ್ಯ:-
1.       ನಿಮ್ಮ ಸಂಸಾರದ ಸದಸ್ಯರುಗಳ ಜೊತೆಗೆ ಬಹಳ ಕಠಿಣ ಸಂಬಂಧವನ್ನ ಬೆಳೆಸಿಕೊಳ್ತೀರ.
2.       ನೀವು ತಾಳ್ಮೆಯನ್ನ ಇಡುವುದೇ ಬಹಳ ಒಳ್ಳೆಯದು.
3.       ನಿಮ್ಮ ತಮ್ಮಂದಿರೊಡನೆ ನಿಮ್ಮ ಉತ್ತಮ ಸಂಬಂಧ ಬಿಗಡಾಯಿಸಬಹುದು. ಅದು ಈವಾಗಲೇ ನಮ್ಮ ಕಣ್ಣಿಗೆ ಕಾಣಿಸುತ್ತವೆ.
ನಿಮ್ಮ ಕೇರಿಯರ್ ಬಗ್ಗೆ ಸಾಮಾನ್ಯ ಭವಿಷ್ಯ:-
1.       ನಿಮ್ಮ ಕೇರಿಯರ್ ವಿಭಾಗವೇ ನಿಮ್ಮ ಹೆಚ್ಚಿನ ಸಮಯವನ್ನ ತಿನ್ನುತ್ತವೆ..
2.       ನಿಮ್ಮ ಕರ್ಮ ಕ್ಷೇತ್ರದಲ್ಲಿ ಎಲ್ಲಾ ಗುರಿಗಳನ್ನ ಸಮಯದ ಒಳಗೇ ಪೂರ್ತಿ ಮಾಡಿ.
3.       ಆದರೆ ಈ ಗೌರವವನ್ನ ನೀವೊಬ್ಬರೇ ತೆಗೆದುಕೊಳ್ಳಬೇಡಿ. ಅದನ್ನ ಬೇರವರೊಡನೆ ಹಂಚಿಕೊಳ್ಳಿ.
4.       ಇದರಿಂದಾಗಿ ನಿಮ್ಮ ಕೇರಿಯರ್ ಬಹಳ ಒಳ್ಳೇ ರೀತಿಯಿಂದ ನಡೆಯುತ್ತದೆ.
ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಸಾಮಾನ್ಯ ಜ್ಯೋತಿಷ್ಯ:-
1.      ನೀವುಗಳು ವಿಧ್ಯಾರ್ಥಿಗಳಾಗಿದ್ದಲ್ಲಿ ನಿಮ್ಮ ಸಮಯ ಬಹಳ ಕಠಿಣವಾದದ್ದು
2.      ತಾಳ್ಮೆಯೊಂದಿಗೆ ಇರಲು ಮರೆಯಬೇಡಿ.
3.      ಮದ್ಯಮ ಅರ್ಧ ಭಾಗದಲ್ಲಿ ಒಂದು ಆಸ್ಚರ್ಯ (ಟರ್ನರೌಂಡ್) ನಡೆಯಲಿದೆ!

ನಿಮ್ಮ ಲವ್ ವಿಚಾರದಲ್ಲಿ ಸಾಮಾನ್ಯ ಭವಿಷ್ಯ:-
1.      ನಿಮ್ಮ ಲವ್ ಸಂಬಂಧಗಳು ಒಳ್ಳೇ ರೀತಿಯಲ್ಲಿ ನಡೆಯಲಿಕ್ಕಿಲ್ಲ ಅಂದರೆ, ಯಾರನ್ನೂ ಬಯ್ಯಬೇಡಿ. ನಿಮ್ಮಲ್ಲಿ ತಾಳ್ಮೆ ಒಂದಿರಲಿ.
2.      ಈ ವರ್ಷದಲ್ಲಿ ಒಂದು +ವ್ ಬದಲಾವಣೆಯನ್ನ ಕಾಣಲಿಕ್ಕಿರುವಿರಿ.
ನಿಮ್ಮ ಹಣಕಾಸಿನ ವಿಚಾರದಲ್ಲಿ ಸಾಮಾನ್ಯ ಭವಿಷ್ಯ:-
1.      ನಿಮ್ಮ ಹಣ ಕಾಸಿನ ಭಾಗ ಈ ವರ್ಷ ಬಹಳ ಒಳ್ಳೆಯ ರೀತಿಯಲ್ಲಿ ನಡೆಯುತ್ತವೆ.
2.      ನಿಮ್ಮ ಖರ್ಚಿನಲ್ಲಿ ಖಂಡಿತ ಕಂಟ್ರೋಲ್ ಇದೆ.
3.      ಆದರೆ ಈ ಸಂಬಂಧ ನೀವು ಒಂದು ಬಹಳ ದೊಡ್ಡ ಡಿಸಿಷನ್ ತೆಗೆದುಕೊಳ್ಳಬೇಕು.
ನಿಮ್ಮ ಆರೋಗ್ಯದ ಬಗ್ಗೆ ಸಾಮಾನ್ಯ ಭವಿಷ್ಯ :-
1.      ನೀವು ಬಹಳ ಸ್ತ್ರೆಸ್ಸನ್ನ ತೆಗೆದುಕೊಳ್ತೀರ! ಆದ್ದರಿಂದ ನಿಮಗೆ ಬೇಕು ವಿಶ್ರಾಂತಿ.
2.      ಅಲ್ಲಲ್ಲಿ ಮೈನರ್ ಆರೋಗ್ಯ ಇಸ್ಸ್ಯೂಸ್ ಬರಬಹುದು.ಅಸ್ಟೆ. ಆದರೆ ಹೆದರುವ ಅಗತ್ಯವಿಲ್ಲ.
ತಿಂಗಳ ಭವಿಷ್ಯ:-
1.      ಏಪ್ರಿಲ್                                    ಈ ತಿಂಗಳು ಬಹಳ ಕಠಿಣ.   
2.      ಮೇ                              ಈ ತಿಂಗಳು ಸಾಮಾಜಿಕ ಸೇವೆ
3.      ಜೂನ್                         ಕೆಲಸದ ಪ್ರಯುಕ್ತ ಪ್ರಯಾಣ
4.      ಜುಲೈ                           ಈ ತಿಂಗಳು ಬಹಳ ಎಳೆಯುತ್ತೆ.
5.      ಆಗಸ್ಟ್                          ಕೆಲಸ ಮತ್ತು ಕರ್ಮಕ್ಷೇತ್ರಕ್ಕೆ ಮೀಸಲಾಗಿಡೀ.
6.      ಸಪ್ಟೆಂಬರ್                  ನಿಮ್ಮ ಹೆಂಡತಿಯೊಡನೆ ಬಹಳ ಕಠಿಣ ಸಂಬಂಧ.
7.      ಆಕ್ಟೋಬರ್               ಹೊಸ ಬಿಸಿನೆಸ್ಸಿಗೆ ಇದು ಒಳ್ಳೆಯ ತಿಂಗಳು.
8.      ನವೆಂಬರ್                   ಧಾರ್ಮಿಕ ಕಾರ್ಯಕ್ಕೆ ಅತೀ ಉತ್ತಮ ತಿಂಗಳು.
9.      ಡಿಸೆಂಬರ್                  ಬಹಳಸ್ಟು ಆಚರಣೆಯ ತಿಂಗಳು.

ಎಚ್ಚರಿಕೆ:-
1.      ಕೋಪದಲ್ಲಿರುವಾಗ ಯಾವುದೇ ಡಿಸಿಷನ್ ತೆಗೆದುಕೊಳ್ಳದಿರಿ.
2.      ಮೇ ತಿಂಗಳಿಂದ ಡಿಸೆಂಬರ್ ತಿಂಗಳ ವರೆಗೆ ಯಾವುದೇ ಇನ್ವೆಸ್ಟ್ಮೆಂಟ್ಸ್ ಮಾಡದಿರಿ.
ಪರಿಹಾರ :-
1.      ನೀವು ದೇವಸ್ಥಾನಗಳನ್ನ ಸುತ್ತಿರಿ.
2.      ಹಿರಿಯರ ಆಶೀರ್ವಾದಗಳನ್ನ ತೆಗೆದುಕೊಳ್ಳಿ.
3.      ಕುಡಿಯುವುದನ್ನ ಬಿಡಿ ಹಾಗೂ ಮಾಂಸವನ್ನ ತಿನ್ನುವುದನ್ನ ಬಿಡಿ.
4.      ರಾಮ ರಕ್ಷ ಸ್ತೋತ್ರವನ್ನ ಪಠಿಸಿ. ಅದು ನಿಮ್ಮನ್ನ ರಕ್ಷಿಸುತ್ತದೆ. ರಾಮ ರಕ್ಷಿಸೋ, ಪ್ರೇಮದಿಂದಲೀ, ಕಾಮಿತರ್ಥ ಫಲವನ್ನಿತ್ತ ಭೂಮಿ ಜಾಪತೇ.
ಉಗಾದಿ ಭವಿಷ್ಯ ೨೦೧೬ (೦೮-೦೪-೨೦೧೬) ಚೈತ್ರ ಶುಕ್ಲ ಪ್ರತಿಪತ್ ತಿಥಿ.
ಈಗ ಮಕರ ರಾಶಿಯವರಿಗೆ ೨೦೧೬ ಉಗಾದಿ ಫಲ ಹೇಗಿದೆ ಎಂದು ನೋಡೋಣ :-
ಡಿಸೆಂಬರ್ ೨೩ ಹಾಗೂ ಜನುವರಿ ೨೦ ರ ಮಧ್ಯ ಯಾರ್ಯಾರು ಜನ್ಮವನ್ನ ಇತ್ತಿದ್ದಾರೋ, ಅವರೆಲ್ಲಾ ವೆಸ್ಟರ್ನ್ ಆಸ್ಟ್ರೋಲಜಿಯ ಪ್ರಾಕಾರ, ಅಂದರೆ ಸೂರ್ಯ ಸಿದ್ಧಾಂತದ ಮೇರೆಗೆ ಮಕರ ರಾಶಿಗೆ ಬರುತ್ತಾರೆ.
ಅದೇ ನಮ್ಮ ವೇದಿಕ್ ಜ್ಯೋತಿಷ್ಯದ ಪ್ರಕಾರ, ನಾವುಗಳು ಚಂದ್ರ ಸಿಧ್ಧಾಂತವನ್ನ ಅನುಸರಿಸುವವರು. ಯಾರದ್ದು ಮಕರ ರಾಶಿಯಲ್ಲಿ ಚಂದ್ರನಿರುತ್ತಾನೋ ಅವರೆಲ್ಲಾ ಮಕರ ರಾಶಿಯ ಫಲಗಳನ್ನ ನೋಡ ತಕ್ಕದ್ದು.
ಇವರಿಗೆ ಗುರು ಗ್ರಹವು ಅಸ್ಟಮ ಸ್ಥಾನಕ್ಕೆ ಬರುತ್ತಾನೆ. ಅದೇ ೧೧, ಆಗಸ್ಟರ ನಂತರ ಭಾಗ್ಯಕ್ಕೆ ಹೋಗುತ್ತಾನೆ. ಕಾರಣ ಗುರು ಗ್ರಹವು ಕನ್ಯಾ ರಾಶಿಗೆ ಹೋಗುತ್ತಾನೆ.
ಶನಿ ಗ್ರಹವು ಲಾಭ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಅಂದರೆ ಫೆಬ್ರುವರಿ, ೨೦೧೭ ರಂದು ನಿಮ್ಮ ವ್ಯಯಕ್ಕೆ ಶನಿ ಮಹಾರಾಜನು ಪ್ರವೇಶವನ್ನ ಮಾಡುವನು.
ಇನ್ನು ರಾಹು –ಕೇತು ಗ್ರಹಗಳು ೮-೨ ರ ಏಕ್ಸಿಸ್ನಲ್ಲಿದ್ದರೆ ಅವುಗಳೂ ಕೂಡ ಮುಂದೆ ೭-೧ ರ ಏಕ್ಸಿಗೆ ಬರುತ್ತವೆ.
ನಿಮ್ಮ ಸಂಸಾರದ ಸದಸ್ಯರುಗಳಿಗೆ ಸಾಮಾನ್ಯ ಭವಿಷ್ಯ:-
1.       ನಿಮ್ಮ ಸಂಸಾರ ಜೀವನ ನೀವು ಎಣಿಸಿದಸ್ಟು ಸುಲಭವಲ್ಲ.
2.       ಸಣ್ಣ ಸಣ್ಣ ಮಾತುಗಳು ಹುಟ್ಟುತ್ತಾವೇ ಇರುತ್ತವೆ ಮತ್ತು ಅದೇ ನಿಮಗೆ ಅಶಾಂತಿಯನ್ನ ತರುತ್ತವೆ. ಸಣ್ಣ ಚಪಾತಿಯನ್ನ ದೊಡ್ಡದನ್ನ ಮಾಡಿ ತಿನ್ನಲು ಮರೆತುಬಿಡಿ.
3.       ತಾಳ್ಮೆ ವಹಿಸಿದಸ್ಟು, ವಾದ ಮಾಡದಿದ್ದಸ್ಟು ಬಹಳ ಒಳ್ಳೆಯದು. ಬರಬರುತ್ತಾ ಯಾಕೋ ನಿಮ್ಮ ತಾಳ್ಮೆ ನಿಮ್ಮ ಕೈಯಲ್ಲಿಲ್ಲ ಅನ್ನಿಸುತ್ತೆ!



ನಿಮ್ಮ ಕೇರಿಯರ್ ಬಗ್ಗೆ ಸಾಮಾನ್ಯ ಭವಿಷ್ಯ:-
1.      ನಿಮ್ಮ ಕೇರಿಯರ್ನಲ್ಲಿ ಹೊಸ ಹೊಸ ಚಲ್ಲೇಂಜಸ್ ಹುಟ್ಟುತ್ತವೆ.
2.      ಟೀಮ್ ಸದಸ್ಯರುಗಳಿಗೆ ಹೆಚ್ಚಿಗೆ ಪ್ರಾಧಾನ್ಯತೆಯನ್ನ ಕೊಡಿ. ಇದನ್ನ ಸಾಮಾನ್ಯವಾಗಿ ಎಲ್ಲರೂ ಯಾಕೋ ಕಲಿಯುವುದಿಲ್ಲ ನನಗೆ ಗೊತ್ತಿಲ್ಲ. ಈ ವಿಚಾರದ ಬಗ್ಗೆ ಚಿಂತನೆಯನ್ನ ಮಾಡಿ. ನೀವು ರಾಜ ಅಥವಾ ರಾಣಿಯಂತೆ ಕುಳಿತು ಆನಂದದಿಂದ ಸಮಯವನ್ನ ಕಳೆಯಬಹುದು. ಇದೊಂದು ಬಿಸಿನೆ ಸೀಕ್ರೆಟ್!
3.      ನಿಮ್ಮ ಟೀಮಿನಲ್ಲಿ ಸಣ್ಣ ಪುಟ್ಟ ತೊಂದರೆಗಳು ಬರಬಹುದು. ಆದರೆ ನೀವು ಅದನ್ನ ಪಾರು ಮಾಡ್ತೀರ.
ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಸಾಮಾನ್ಯ ಜ್ಯೋತಿಷ್ಯ:-
1.      ನಿಮ್ಮ ಎಫೋರ್ಟ್ಸನ್ನ ನೀವು ಹಾಕಿ, ಬಾಕಿ ದೇವರ ಮೇಲೆ ಭಾರ ಹಾಕಿ.
2.      ಸಾಕಸ್ಟು ಸಂದರ್ಭಗಳು ಹುಟ್ಟುತ್ತವೆ. ಅದನ್ನ ಸರಿಯಾದ ಸಂದರ್ಭದಲ್ಲಿ ಉಪಯೋಗಿಸಿಕೊಳ್ಳಿ.
3.      ಹೈಯರ್ ವಿದ್ಯಾಭ್ಯಾಸಕ್ಕೆ ಹೋಗುವವರಿಗೆ ಬಹಳ ಉತ್ತಮ ಕಾಲವಿದು.
ನಿಮ್ಮ ಲವ್ ವಿಚಾರದಲ್ಲಿ ಸಾಮಾನ್ಯ ಭವಿಷ್ಯ:-
1.       ಈ ವರ್ಷ ಲವ್ ವಿಷಯದಲ್ಲಿ ನಿಮ್ಮದೇ ವರ್ಷ.
2.       ಹೊಸ ಸಂಬಂಧಕ್ಕೆ ಇದು ತಕ್ಕ ಸಮಯ.
3.       ಎರಡನೇ ಅರ್ಧ ಭಾಗವು  ಸಂಬಂಧವನ್ನ ಪಕ್ಕಾ ಮಾಡುವುದಕ್ಕೆ ತಕ್ಕುದಾದ ಸಮಯ.
ನಿಮ್ಮ ಹಣಕಾಸಿನ ವಿಚಾರದಲ್ಲಿ ಸಾಮಾನ್ಯ ಭವಿಷ್ಯ:-
1.      ಈ ವಿಚಾರದಲ್ಲಿ ನಿಮಗೆ ಇದು ಕಠಿಣ ಸಮಯ. ಆದರೆ ನೀವು ಅದರಿಂದ ಪಾರಾಗುವಿರಿ ಎನ್ನುವ ಧೈರ್ಯ ನನಗಿದೆ.
2.      ನಿಮ್ಮ ಸಂಸಾರಿಗರು ಮತ್ತು ಸ್ನೇಹಿತರು ನಿಮ್ಮ ಕಸ್ಟವನ್ನ ಬಗೆಹರಿಸುವಲ್ಲಿ, ನಿಮಗೆ ಸಹಾಯವನ್ನ ಮಾಡುವವರು. ಅವರಿಗೆ ಬಯ್ಯದಿರಿ. ಕೃತಜ್ನತೆಯನ್ನ ಸೂಚಿಸಲು ಮರೆಯಬೇಡಿ.
3.      ಆದರೆ ನಿಮ್ಮ ಖರ್ಚಿನ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ. ವ್ಯರ್ಥ ಖರ್ಚನ್ನ ಯಾರೂ ಮಾಡಬಾರದು.
ನಿಮ್ಮ ಆರೋಗ್ಯದ ಬಗ್ಗೆ ಸಾಮಾನ್ಯ ಭವಿಷ್ಯ :-
1.      ನಿಮ್ಮ ಕರ್ಮ ಮತ್ತು ಸಂಸಾರವನ್ನ ಸರಿಯಾಗಿ ಬೇಲೆನ್ಸ್ ಮಾಡಬೇಕು.
2.      ನೀವು ಹೆಚ್ಚು ಧಾರ್ಮಿಕ ಕಾರ್ಯದಲ್ಲಿ ತೊಡಗಬೇಕು.
ತಿಂಗಳ ಭವಿಷ್ಯ:-
1.      ಏಪ್ರಿಲ್                        ನಿಮ್ಮ ಆರೋಗ್ಯದ ವಿಚಾರದಲ್ಲಿ ನೆಮ್ಮದಿಯಿಂದ ಇರಿ.
2.      ಮೇ                  ಮೆಂಟಲ್ ಸಂಬಂಧಿತ ಇಸ್ಯೂಸ್ ಬರಬಹುದು.
3.      ಜೂನ್             ಇದು ಸಕಾಲ, ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ.
4.      ಜುಲೈ               ನಿಮ್ಮ ಫನೇನ್ಸ್ ವಿಚಾರದಲ್ಲಿ ಬಹು ಉತ್ತಮ
5.      ಆಗಸ್ಟ್              ಲವ್ ಏಂಡ ರೋಮೇನ್ಸ್ ಲೈಫ಼ನಲ್ಲಿ ಸಂತೋಷದ ವಾತಾವರಣ.
6.      ಸಪ್ಟೆಂಬರ್      ಕೇರಿಯರಿಗೆ ಅತಿ ಉತ್ತಮ ಸಮಯ
7.      ಆಕ್ಟೋಬರ್   ಈ ತಿಂಗಳು ಹಣದ ಸುರಿಮಳೆ.
8.      ನವೆಂಬರ್       ನಿಮ್ಮ ಏಟಿಟ್ಯೂಡಿನ ಬಗ್ಗೆ ಕಾಳಜಿ ಇರಲಿ.
9.      ಡಿಸೆಂಬರ್      ನಿಮಗೆ ಎಲ್ಲಾ ಕಡ್ಯಲ್ಲೂ ಸಂತೋಷದ ವಾತಾವರಣ.

ಎಚ್ಚರಿಕೆ:-
1.      ಚಂದ್ರನು ಸಿಂಹದಲ್ಲಿರುವಾಗ, ದೂರ ಪ್ರಯಾಣವನ್ನ ಮಾಡದಿರಿ.
2.      ದೊಡ್ಡ ಇನ್ವೆಸ್ಟ್ಮೆಂಟ್ಸ್ ಮಾಡುವಾಗ ಅಥವಾ ಆಸ್ಥಿಯನ್ನ ಖರೀದಿಸುವಾಗ ಯೋಚನೆ ಇರಲಿ. ಥಿಂಕ್ ಬಿಫೋರ್ ಯು ಇನ್ಕ್ ಅನ್ನುವ ಗಾದೆಯ ಮಾತೇ ಆಂಗ್ರೇಜಿಯಲ್ಲಿದೆ. ನೆನಪಿಸಿಕೊಳ್ಳಿ.
ಪರಿಹಾರ :-
1.       ಹನುಮಂತನ ದೇವಸ್ತಾನವನ್ನ ಪ್ರತೀ ಮಂಗಳವಾರದಂದು ಭೇಟಿ ಮಾಡಿ.
2.       ಅಲ್ಲಿಯೇ ಹನುಮಾನ್ ಚಾಲೀಸ್ ಓದಿ ನೋಡಿ.
3.       ಶನಿ ಸ್ತೋತ್ರ ಪ್ಶನಿವಾರದಂದು ಪಠಿಸಿ.
4.       ಆರ್ಗಲ ಸ್ತೋತ್ರ ನಿಮ್ಮನ್ನ ಅತೀ ಶ್ರೀಮಂತನನ್ನಾಗಿ ಮಾಡುತ್ತದೆ.
ಉಗಾದಿ ಭವಿಷ್ಯ ೨೦೧೬ (೦೮-೦೪-೨೦೧೬) ಚೈತ್ರ ಶುಕ್ಲ ಪ್ರತಿಪತ್ ತಿಥಿ.
ಈಗ ಕುಂಭ ರಾಶಿಯವರಿಗೆ ೨೦೧೬ ಉಗಾದಿ ಫಲ ಹೇಗಿದೆ ಎಂದು ನೋಡೋಣ :-
ಜನುವರಿ ೨೧ ರಿಂದ  ಫೆಬ್ರುವರಿ ೧೯ ರ ಮಧ್ಯ ಯಾರ್ಯಾರು ಜನ್ಮವನ್ನ ಎತ್ತಿದ್ದಾರೋ, ಅವರೆಲ್ಲಾ ವೆಸ್ಟರ್ನ್ ಆಸ್ಟ್ರೋಲಜಿಯ ಪ್ರಾಕಾರ, ಅಂದರೆ ಸೂರ್ಯ ಸಿದ್ಧಾಂತದ ಮೇರೆಗೆ ಧನೂರ್ ರಾಶಿಗೆ ಬರುತ್ತಾರೆ.
ಅದೇ ನಮ್ಮ ವೇದಿಕ್ ಜ್ಯೋತಿಷ್ಯದ ಪ್ರಕಾರ, ನಾವುಗಳು ಚಂದ್ರ ಸಿಧ್ಧಾಂತವನ್ನ ಅನುಸರಿಸುವವರು. ಯಾರದ್ದು ಕುಂಭ ರಾಶಿಯಲ್ಲಿ ಚಂದ್ರನಿರುತ್ತಾನೋ ಅವರೆಲ್ಲಾ ಕುಂಭ ರಾಶಿಯ ಫಲಗಳನ್ನ ನೋಡ ತಕ್ಕದ್ದು.
ಇವರಿಗೆ ಗುರು ಗ್ರಹವು ಸಪ್ತಮ ಸ್ಥಾನಕ್ಕೆ ಬರುತ್ತಾನೆ. ಅದೇ ೧೧, ಆಗಸ್ಟರ ನಂತರ ಅಸ್ಟಮಕ್ಕೆ ಹೋಗುತ್ತಾನೆ. ಕಾರಣ ಗುರು ಗ್ರಹವು ಕನ್ಯಾ ರಾಶಿಗೆ ಹೋಗುತ್ತಾನೆ.
ಶನಿ ಗ್ರಹವು ಕರ್ಮ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಅಂದರೆ ಫೆಬ್ರುವರಿ, ೨೦೧೭ ರಂದು ನಿಮ್ಮ ಲಾಭಕ್ಕೆ ಶನಿ ಮಹಾರಾಜನು ಪ್ರವೇಶವನ್ನ ಮಾಡುವನು.
ಇನ್ನು ರಾಹು –ಕೇತು ಗ್ರಹಗಳು ೭-೧ ರ ಏಕ್ಸಿಸ್ನಲ್ಲಿದ್ದರೆ ಅವುಗಳೂ ಕೂಡ ಮುಂದೆ ೬-೨ ರ ಏಕ್ಸಿಗೆ ಬರುತ್ತವೆ.
ನಿಮ್ಮ ಸಂಸಾರದ ಸದಸ್ಯರುಗಳಿಗೆ ಸಾಮಾನ್ಯ ಭವಿಷ್ಯ:-
1.       ನಿಮಗೆ ನಿಮ್ಮ ಸಂಸಾರದ ಸದಸ್ಯರುಗಳಿಂದ ಪೂರ್ಣ ಸಹಾಯ ಉಂಟು. ನೀವೆಂದರೆ ಅವರುಗಳಿಗೆ ಪಂಚ ಪ್ರಾಣ.
2.       ಪ್ರಥಮಾರ್ಧದಲ್ಲಿ ನಿಮಗೆ ನಿಮ್ಮ ಮದುವೆ ಜೀವನದಲ್ಲಿ ಸ್ವಲ್ಪ ತೊಂದರೆಗಳು ಬರಬಹುದು.
3.       ಆಗಸ್ಟಿನ ನಂತರ ಶಾಂತಿ ಸಿಗುತ್ತದೆ.
4.       ನಿಮ್ಮ ತಂದೆ-ತಾಯಿಯರ  ಜೊತೆಯಲ್ಲಿ ಉತ್ತಮ ಸಂಬಂಧವಿರುತ್ತದೆ.
ನಿಮ್ಮ ಕೇರಿಯರ್ ಬಗ್ಗೆ ಸಾಮಾನ್ಯ ಭವಿಷ್ಯ:-
1.      ಮಧ್ಯಮಾರ್ಧದಲ್ಲಿ ನಿಮಗೆ ಹೊಸ ಪ್ರೊಜೆಕ್ಟ್ಸ್ ಶುರು ಮಾಡಲು ತಕ್ಕ ಸಮಯ. ಈ ಸಮಯವನ್ನ ವ್ಯರ್ಥ ಹಾಳನ್ನ ಮಾಡದಿರಿ.
2.      ನಿಮ್ಮ ಕರ್ಮ ಸ್ತಾನದಲ್ಲಿ ಡಿಪ್ಲೋಮೇಟಿಕ್ ಆಗಿ ವರ್ತಿಸಿ. ಅದು ನಿಮಗೆ ತಕ್ಕ ಬೆಲೆಯನ್ನ ಕೊಡುತ್ತೆ.
3.      ಇಡೀ ವರ್ಷವಿಡೀ ನಿಮಗೆ ಉತ್ತಮ ವರ್ಷ.
ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಸಾಮಾನ್ಯ ಜ್ಯೋತಿಷ್ಯ:-
1.      ಈ ವಿಚಾರದಲ್ಲಿ ಬಹಳ ಕಠಿಣ ಸಮಯ
2.      ಧೈರ್ಯ ಮತ್ತು ಧೃಢ ನಿರ್ಧಾರವೇ ನಿಮ್ಮನ್ನ ಪಾರು ಮಾಡುತ್ತೆ. ನಡೆ ಮುಂದೆ ನಡೆ ಮುಂದೆ ಹಿಗ್ಗಿ ನಡೆ ಮುಂದೆ, ತಗ್ಗದೆಯೇ, ಬಗ್ಗದೆಯೇ ಹಿಗ್ಗಿ ನಡೆ ಮುಂದೆ.
3.      ನಿಮ್ಮ ಕಠಿಣ ಪರಿಶ್ರಮದಿಂದ ನೀವು ನಿಮ್ಮ ಗುರಿಯನ್ನ ಮುಟ್ಟುವಿರಿ. ಪ್ರಯತ್ನವನ್ನ ಬಿಡಬೇಡಿರಿ.
ನಿಮ್ಮ ಲವ್ ವಿಚಾರದಲ್ಲಿ ಸಾಮಾನ್ಯ ಭವಿಷ್ಯ:-
1.       ಈ ವರ್ಷ ನಿಮಗೆ ಉತ್ತಮ ವರ್ಷ ಈ ಲವ ಏಂಡ್ ರೋಮೇನ್ಸಿನಲ್ಲಿ.
2.       ಆದರೆ ನಿಮ್ಮ ಸ್ಪೌಸಿನ ಜೊತೆಯಲ್ಲಿ ಪಾರದರ್ಷಕವಿರಲಿ.
3.       ಯಾರಾದರೂ ಒಂಟಿಯಾಗಿದ್ದಲ್ಲಿ, ಮದುವೆ ಯೋಗವುಂಟು ಈ ವರ್ಷ.
ನಿಮ್ಮ ಹಣಕಾಸಿನ ವಿಚಾರದಲ್ಲಿ ಸಾಮಾನ್ಯ ಭವಿಷ್ಯ:-
1.       ನಿಮಗೆ ಈ ವರ್ಷವಿಡೀ ಹಣದ ಸುರಿಮಳೆ ಉಂಟು.
2.       ಯಾರಿಗೂ ಸಾಲ ಕೊಡುವಾಗ ಎರಡು ಬಾರಿ ಯೋಚಿಸಿ
3.       ನಿಮ್ಮ ಖರ್ಚು ಮತ್ತು ಆದಾಯದ ನಡುವೆ ಸಮ ತೋಲನವಿರಲಿ.
ನಿಮ್ಮ ಆರೋಗ್ಯದ ಬಗ್ಗೆ ಸಾಮಾನ್ಯ ಭವಿಷ್ಯ :-
1.       ಯಾವುದೇ ಆಲ್ಕೋಹಾಲಿಗೆ ಶರಣಾಗಬೇಡಿರಿ.
2.       ನಿಮ್ಮ ಕಣ್ಣಿಗೆ ಸಂಬಂಧಿತ ತೊಂದರೆಗಳು ಉಂಟು.
3.       ಆರೋಗ್ಯವಾದ ಡಯಟನ್ನ ಉಪಯೋಗಿಸಿ.
4.       ನಿಮ್ಮ ಕರ್ಮಕ್ಕೂ ಹಾಗೂ  ಆರಾಮ ಜೀವನಕ್ಕೂ ಬೇಲೆನ್ಸ್ ಇರಲಿ.
ತಿಂಗಳ ಭವಿಷ್ಯ:-
1.      ಏಪ್ರಿಲ್                        ನಿಮಗೆ ಕರ್ಮ ಕ್ಷೇತ್ರದಲ್ಲಿ ಒಳ್ಲೇ ಸುದ್ದಿ.
2.      ಮೇ                  ಹೆಚ್ಚಿನ ಖರ್ಚಿನಿಂದಾಗಿ,ಫೈನಾನ್ಸಿಯಲ್ ಸ್ಟ್ರೆಸ್ಸ್ ಉಂಟು.
3.      ಜೂನ್             ಸಾಮಾಜಿಕ ಏಕ್ಟಿವಿಟೀಸಿಗೆ ಇದು ಉತ್ತಮ ತಿಂಗಳು.
4.      ಜುಲೈ               ನಿಮ್ಮ ಸ್ಪೌಸಿನೊಡನೆ ಉತ್ತಮ ಸಂಬಂಧ
5.      ಆಗಸ್ಟ್              ಸಂಸಾರದ ಜೀವನಕ್ಕೆ ಹೆಚ್ಚು ಸಮಯ ಮೀಸಲು.
6.      ಸಪ್ಟೆಂಬರ್      ಪ್ರಯಾಣಕ್ಕೆ ಹೆಚ್ಚು ಆದ್ಯತೆ.
7.      ಆಕ್ಟೋಬರ್   ಕೇರಿಯರಿನಲ್ಲಿ ಇಂಪ್ರೂಮೆಂಟ್ಸ್
8.      ನವೆಂಬರ್       ಮದುವೆ ಬಗ್ಗೆ ಉತ್ತಮ ಸುದ್ದಿ.
9.      ಡಿಸೆಂಬರ್      ನಿಮ್ಮ ಕನಸುಗಳು ನನಸಾಗುವುದರ ಬಗ್ಗೆ ಯೋಚನೆ.
ಎಚ್ಚರಿಕೆ:-
1.      ಏಪ್ರಿಲ್ ಮತ್ತು ಆಕ್ಟೋಬರಿನ ಮಧ್ಯ ದೊಡ್ಡ ಇನ್ವೆಸ್ಟ್ಮೆಂಟ್ಸ್ ಮಾಡದಿರಿ.
2.      ನಿಮ್ಮ ಮನಸ್ಸನ್ನ ತಣ್ಣಗೆ ಇಡಿ.
3.      ಅನಗತ್ಯ ವಾದ ವಿವಾದಗಳಿಗೆ ಗಮನ ಹರಿಸದಿರಿ.
ಪರಿಹಾರ :-
1.       ಶನಿ ದೋಷದಿಂದ ನರಳುವವರು ಹನುಮಾನ್ ಚಾಲೀಸ್ ಓದಿ.
2.       ದುರ್ಗೆಯನ್ನ ಪೂಜಿಸಿ.
3.       ದೇವೀ ಕವಚವನ್ನ ಪಠಿಸಿ.
ಉಗಾದಿ ಭವಿಷ್ಯ ೨೦೧೬ (೦೮-೦೪-೨೦೧೬) ಚೈತ್ರ ಶುಕ್ಲ ಪ್ರತಿಪತ್ ತಿಥಿ.
ಈಗ ಮೀನ ರಾಶಿಯವರಿಗೆ ೨೦೧೬ ಉಗಾದಿ ಫಲ ಹೇಗಿದೆ ಎಂದು ನೋಡೋಣ :-
ಜನುವರಿ ೨೧ ರಿಂದ  ಫೆಬ್ರುವರಿ ೧೯ ರ ಮಧ್ಯ ಯಾರ್ಯಾರು ಜನ್ಮವನ್ನ ಎತ್ತಿದ್ದಾರೋ, ಅವರೆಲ್ಲಾ ವೆಸ್ಟರ್ನ್ ಆಸ್ಟ್ರೋಲಜಿಯ ಪ್ರಾಕಾರ, ಅಂದರೆ ಸೂರ್ಯ ಸಿದ್ಧಾಂತದ ಮೇರೆಗೆ ಧನೂರ್ ರಾಶಿಗೆ ಬರುತ್ತಾರೆ.
ಅದೇ ನಮ್ಮ ವೇದಿಕ್ ಜ್ಯೋತಿಷ್ಯದ ಪ್ರಕಾರ, ನಾವುಗಳು ಚಂದ್ರ ಸಿಧ್ಧಾಂತವನ್ನ ಅನುಸರಿಸುವವರು. ಯಾರದ್ದು ಮೀನ ರಾಶಿಯಲ್ಲಿ ಚಂದ್ರನಿರುತ್ತಾನೋ ಅವರೆಲ್ಲಾ ಮೀನ ರಾಶಿಯ ಫಲಗಳನ್ನ ನೋಡ ತಕ್ಕದ್ದು.
ಇವರಿಗೆ ಗುರು ಗ್ರಹವು ೬ನೇ  ಸ್ಥಾನಕ್ಕೆ ಬರುತ್ತಾನೆ. ಅದೇ ೧೧, ಆಗಸ್ಟರ ನಂತರ ಸಪ್ತಮಕ್ಕೆ ಹೋಗುತ್ತಾನೆ. ಕಾರಣ ಗುರು ಗ್ರಹವು ಕನ್ಯಾ ರಾಶಿಗೆ ಹೋಗುತ್ತಾನೆ.
ಶನಿ ಗ್ರಹವು ಭಾಗ್ಯ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಅಂದರೆ ಫೆಬ್ರುವರಿ, ೨೦೧೭ ರಂದು ನಿಮ್ಮ ಕರ್ಮಕ್ಕೆ ಶನಿ ಮಹಾರಾಜನು ಪ್ರವೇಶವನ್ನ ಮಾಡುವನು.
ಇನ್ನು ರಾಹು –ಕೇತು ಗ್ರಹಗಳು ೬-೧೨ ರ ಏಕ್ಸಿಸ್ನಲ್ಲಿದ್ದರೆ ಅವುಗಳೂ ಕೂಡ ಮುಂದೆ ೫-೧೧ ರ ಏಕ್ಸಿಗೆ ಬರುತ್ತವೆ.
ಯಾರು ಫೆಬ್ರುವರಿ ೨೦ ರಿಂದ ಮಾರ್ಚ್ ೨೦ ರ ವರೆಗೆ ಜನ್ಮವನ್ನ ಎತ್ತಿದ್ದಾರೋಅವರೆಲ್ಲಾ ಸೂರ್ಯ ಸಿದ್ಧಾಂತದ ಮೇರೆಗೆ (ವೆಸ್ಟರ್ನ್ ಆಸ್ತ್ರೋಲಜಿಯ ಪ್ರಕಾರಮೀನ ರಾಶಿಗೆ ಬರ್ತಾರೆ.
ಅದೇ ವೇದಿಕ್ ಆಸ್ಟ್ರೋಲಜಿಯ ಪ್ರಕಾರಚಂದ್ರನು ಹುಟ್ಟುವಾಗ ಮೀನ ರಾಶಿಯಲ್ಲಿರುವಾಗನಮ್ಮ ವೇದಿಕ್ ಜ್ಯೋತಿಷ್ಯದ ಪ್ರಕಾರ ಇದೇ ಮೀನ ರಾಶಿಗೆ ಬರುತ್ತಾರೆ.
 ಉಗಾದಿ ಅಂದರೆ ಏಪ್ರಿಲ್ ೮ ರಿಂದ ಬರುವ ವರ್ಷ ಮಾರ್ಚ್ ೨೭ ರಂದು ಈ ದುರ್ಮುಖಿ ನಾಮ ಸಂವತ್ಸರವು ಅಂತ್ಯಗೊಳ್ಳಲಿದೆ.



ನಿಮ್ಮ ಸಂಸಾರದ ಸದಸ್ಯರುಗಳಿಗೆ ಸಾಮಾನ್ಯ ಭವಿಷ್ಯ:-
1.      ಆಗಸ್ಟ್ ತಿಂಗಳವರೆಗೆ ಕೆಲವೊಂದು ಇಸ್ಸ್ಯೂಸ್ ಫೆಮಿಲಿ ಸಂಬಂಧಿತವಾಗಿ ಇರಬಹುದು. ಆದರೆ ಅವುಗಳಿಗೆ ನೀವುಗಳು ಬಹಳ ತಾಳ್ಮೆಯಿಂದಾಗಿ ಪರಿಹಾರವನ್ನ ಕಂಡುಕೊಳ್ಳಬೇಕು..
2.      ಅನ್ಯಥಾ ವಾದ ವಿವಾದಗಳನ್ನ ಬಿಟ್ಟು ಬಿಡಿ. ಅದು ನಿಮಗೇ ಒಳ್ಳೆಯದು.
3.      ನಿಮ್ಮ ಮದುವೆ ಜೀವನ ಹಾಗೂ ನಿಮ್ಮ ತಂದೆ ತಾಯಿಯರೊಡನೆ ಇರುವ ಸಂಬಂಧ ಕೆಡಲು ಸಾಧ್ಯತೆ ಜಾಸ್ತಿ.
4.      ಬೇರವರ ಉಪದೇಶವನ್ನ ಸ್ವಲ್ಪ ಕೇಳಿ ಅದರಲ್ಲೂ ನಿಮ್ಮ ತಂದೆಯ ಉಪದೇಶ ಮುಖ್ಯವಾಗಿ. ಅವ್ರು ನಿಮ್ಮ ಶತ್ರುವಲ್ಲ. ನಿಮ್ಮ ಸದಾ ಹಿತಚಿಂತಕರು.
5.      ಅನ್ಯಥಾ ನಿಮ್ಮ ಉಪದೇಶವನ್ನ ಬೇರವರ ಮೇಲೆ ಹೇರದಿರಿ. ಇದು ನಿಮ್ಮ ಆರೋಗ್ಯಕ್ಕೇ ಒಳ್ಳೆಯದು.
ನಿಮ್ಮ ಕೇರಿಯರ್ ಬಗ್ಗೆ ಸಾಮಾನ್ಯ ಭವಿಷ್ಯ:-
1.      ಹೊಸ ವ್ಯಾಪಾರ ಅಥವಾ ಪ್ರೊಜೆಕ್ಟ್ಸ್ ಮಾಡಲು ಇದೇ ಸರಿಯಾದ ಸಮಯ. ಯುಗಾದಿ ಇರುವುದೇ ಹೊಸ ವರ್ಷದ ಆರಂಭಕ್ಕೆ. ಅಂದರೆ ಎಲ್ಲಾ ಹೊಸತು ಹೊಸತು ಇರಬೇಕಸ್ಟೇ. ಆದ್ದರಿಂದ ನೀವು ಕೂಡಾ ಹೊಸ ಐಡಿಯಾಸನ್ನ ತನ್ನಿ. ನಿಮ್ಮ ಪ್ರಸೆನ್ಸನ್ನ ಬೇರವರಿಗೆ ಫೀಲ್ ಮಾಡಿಸಿ.
2.      ಯಾವುದೇ ಕೆಲಸಕ್ಕೆ ಹೆಚ್ಚಿನ ಸಮಯವನ್ನ ತೆಗೆದುಕೊಳ್ಳದಿರಿ. ಬೇಗ ಇಂಪ್ಲಿಮೆಂಟ್ಸ್ ಮಾಡಿರಿ.
3.      ಆರ್ಟ್ಸ್ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಒಳ್ಳೇ ಪಬ್ಲಿಸಿಟಿ ಸಿಗುತ್ತೆ. ಮುಖ್ಯವಾಗಿ ಟೀವೀ ಉದ್ಯಮದಲ್ಲಿರುವವರಿಗೆ, ಕಮ್ಯೂನಿಕೇಷನ್ ಉದ್ಯಮದಲ್ಲಿರುವವರಿಗೆ ಇದು ಅತ್ಯಗತ್ಯ.
4.      ಎರಡನೇ ಅರ್ಧ ಭಾಗವು ನಿಮಗೆ ಅತೀ ಉತ್ತಮ ಸಮಯ. ಈ ಸಮಯವನ್ನ ವ್ಯರ್ಥ ಹಾಳು ಮಾಡದಿರಿ.
5.      ಈ ಅರ್ಧ ಭಾಗದಲ್ಲಿ ನೀವೆಲ್ಲಾ ಗುರಿಗಳನ್ನ ಮುಟ್ಟುವಿರಿ. ನಿಮ್ಮ ಎಲ್ಲಾ ಟಾರ್ಗೆಟ್ ಕಂಪ್ಲೀಟ್. ನಿಮಗೆ ಬೋನಸ್ ಒಂದೇ ಅಲ್ಲ, ಪ್ರಮೋಷನ್ ಅಥವಾ ಸಂಬಳದ ಹೆಚ್ಚಳ ಸಿಕ್ಕೀತು. ಕನಸು ಕಾಣಿರಿ
ನಿಮ್ಮ ವಿದ್ಯಾಭ್ಯಾಸದ ಬಗ್ಗೆ ಸಾಮಾನ್ಯ ಜ್ಯೋತಿಷ್ಯ:-
1.       ವಿದ್ಯಾರ್ಥಿಗಳಿಗೆ ಇದು ಉತ್ತಮ ಕಾಲ. ನಿಮ್ಮ ಗುರಿಯನ್ನ ತಪ್ಪದೆಯೇ ತಲಪುವಿರಿ.
2.       ಸೋಂಬೇರಿತನವನ್ನ ಬಿಟ್ಟು ಹಾರ್ಡ ವರ್ಕ್ ಮಾಡಿರಿ. ಕಸ್ಟ ಪಟ್ಟರೆ ಇಸ್ಟ ಸಿಗುವುದು. ಅದು ನಿಮಗೆ ತಿಳಿಯದಿದ್ದರೆ ನಾನೀಗ ಈ ಮೂಲಕ ತಿಳಿಸುತ್ತೇನೆ.
3.       ಪರದೇಶಕ್ಕೆ ಹೋಗುವವರಿಗೆ ಇದು ಉತ್ತಮ ಕಾಲ. ಈ ಒಂದು ಸುವರ್ಣಾವಕಾಶವನ್ನ ಬಿಡಬೇಡಿ.
ನಿಮ್ಮ ಲವ್ ವಿಚಾರದಲ್ಲಿ ಸಾಮಾನ್ಯ ಭವಿಷ್ಯ:-
1.       ಬೇಚಲರ್ಸ್ ಅವರುಗಳಿಗೆ  ಆಗಸ್ಟ ತಿಂಗಳವರೆಗೆ ಮದುವೆ ಜೀವನಕ್ಕೆ ಕಾಯಬೇಕು. ಕಾರಣ ಗುರು ಗ್ರಹವು ನಿಮ್ಮ ಕಳತ್ರ ಸ್ಥಾನವಾದ ೭ ನೇ ಮನೆಗೆ ಹೋಗುವನು. ಆವಾಗಲೇ ನಿಮಗೆ ಗುರು ಬಲ ಬರುತ್ತದೆ. ಮದುವೆ ಆಗುತ್ತೆ. ಖಂಡಿತ. ಅಲ್ಲಿಯವರೆಗೆ ಸಣ್ಣ ಪುಟ್ಟ ಮಿಸ್ ಅನ್ಡರ್ಸ್ಟೇಂಡಿಂಗ್ಸ್ ನಡೆಯುತ್ತಿರುತ್ತದೆ.
2.       ಮದುವೆ ಆದವರು ಬಹಳ ಉತ್ತಮ ಜೀವನವನ್ನ ಸಾಗಿಸುವರು. ನಿಮ್ಮದ್ದು ದಿನಾ ಹನಿಮೂನ್! ಇನ್ನೇನು ಬೇಕು ಹೇಳಿ ಜೀವನದಲ್ಲಿ?
ನಿಮ್ಮ ಹಣಕಾಸಿನ ವಿಚಾರದಲ್ಲಿ ಸಾಮಾನ್ಯ ಭವಿಷ್ಯ:-
1.      ಈ ವರ್ಷ ಹಣಕಾಸಿಗೆ ಉತ್ತಮ ವರ್ಷ. ಹಣವನ್ನ ಗೋರುವಿರಿ. ಪ್ರೋಪರ್ ಪ್ಲೇನನ್ನ ಈವಾಗಲೇ ಮಾಡಿರಿ.
2.      ರಿಯಲ್ ಎಸ್ಟೇಟ್ ಮೇಲೆ ಇನ್ವೆಸ್ಟ್  ಮಾಡಲು ಇದರಸ್ಟು ಸುವರ್ಣಾವಕಾಶ ನಿಮಗೆ ಬೇರೆ ಸಿಗೋಲ್ಲ.
3.      ಆಗಸ್ಟಿನವರೆಗೆ ದೊಡ್ಡ ದೊಡ್ಡ ನಿರ್ಧಾರಗಳನ್ನ ತೆಗೆದುಕೊಳ್ಳಲು ಮುಂದುವರಿಸಿ. ನಿಮಗೆ ಒಳ್ಳೆಯದಾಗಬೇಕಿದ್ದಲ್ಲಿ ಅವುಗಳನ್ನ ಈ ಪೀರಿಯಡ್ನಲ್ಲಿ ತೆಗೆದುಕೊಳ್ಳದಿರಿ.
4.      ಪ್ರಥಮಾರ್ಧದಲ್ಲಿ ಹಳೇ ಸಾಲವನ್ನ ತೀರಿಸುವಿರಿ. ಕಾರಣ ಹಳೇ ಬಾಕೆಯಲ್ಲಾ ಬರಲಿಕ್ಕಿದೆ.
5.      ಎರಡನೇ ಅರ್ಧದಲ್ಲಿ ಇನ್ವೆಸ್ಟ್ ಮಾಡುವಿರಿ.
ನಿಮ್ಮ ಆರೋಗ್ಯದ ಬಗ್ಗೆ ಸಾಮಾನ್ಯ ಭವಿಷ್ಯ :-
1.       ನಿಮ್ಮ ಆರೋಗ್ಯಕ್ಕೆ ಯಾವ ತೊಂದರೆಯೂ ಇಲ್ಲ. ಬಹಳ ಫಿಟ್.
2.       ಏಪ್ರಿಲ್ ಮತ್ತು ಸಪ್ಟೆಂಬರ್ ತಿಂಗಳಲ್ಲಿ ಸ್ವಲ್ಪ ಮಟ್ಟಿಗೆ ಆರೋಗ್ಯ ಕೆಡಬಹುದು. ಆದರೆ ಅದರಿಂದ ಆರಾಮವಾಗಿ ಪಾರಾಗುವಿರಿ.
3.       ಹೆಚ್ಚಿಗೆ ಸ್ಟ್ರೆಸ್ಸ್ ತೆಗೆದುಕೊಳ್ಳದಿರಿ. ಇದು ನಿಮ್ಮ ದುರ್ಬಲತೆ!
4.       ಕರ್ಮ ಕ್ಷೇತ್ರದಲ್ಲಿ ಹಾಗೂ ನಿಮ್ಮ ಸಂಸಾರಕ್ಷೇತ್ರದಲ್ಲಿ ಉತ್ತಮ ಸಮತೋಲನವನ್ನ ಇಟ್ಟುಕೊಳ್ಳೀ. ಒಂದು ಹೆಚ್ಚು, ಮತ್ತೊಂದು ಕಡೀಮೆ ಇರದಿರಲಿ.
ತಿಂಗಳ ಭವಿಷ್ಯ:-
1.      ಏಪ್ರಿಲ್                        ನಿಮ್ಮ ಹಣದ ಒಳಹರಿಕೆಗೂ ಲವ ಲೈಫಿಗೂ ಬದಲಾವಣೆ ಬರುತ್ತೆ.
2.      ಮೇ                  ಈ ತಿಂಗಳು ನಿಮಗೆ ಐಷ್ವರ್ಯಕ್ಕೂ ಪ್ರೇಮಕ್ಕೂ ಉತ್ತಮ ಮಾಸ.
3.      ಜೂನ್             ನಿಮ್ಮ ಸಹವರ್ಗದವರ ಸಹಾಯವನ್ನ ಕರ್ಮ ಕ್ಷೇತ್ರದಲ್ಲಿ ತೆಗೆದುಕೊಳ್ಳಿ.
4.      ಜುಲೈ               ಇದು ನಿಮಗೆ ಬಿಸಿನೆಸ್ಸಿಗೆ ಉತ್ತಮ ಮಾಸ. ಸಾಮಾಜಿಕ ಕ್ಷೇತ್ರಕ್ಕೂ ಉತ್ತಮ.
5.      ಆಗಸ್ಟ              ರೋಮೇಂಟಿಕ್ ಜೀವನಕ್ಕೆ ಅತೀ ಉತ್ತಮ ಮಾಸವಿದು.
6.      ಸಪ್ಟೆಂಬರ್      ಈ ತಿಂಗಳು ಬಹಳಸ್ಟು ಎಕ್ಸೈಟ್ಮೆಂಟ್ಸ್ ಇರುತ್ತೆ.
7.      ಆಕ್ಟೋಬರ್     +ವ್ ಬದಲಾವಣೆಗಳು ನಿಮ್ಮ ಬಿಸಿನೆಸ್ ಹಾಗೂ ಕೇರಿಯರ್ ಜೀವನದಲ್ಲಿ
8.      ನವೆಂಬರ್       ಈ ತಿಂಗಳು ಪ್ರಯಾಣಕ್ಕೆ ಬಹಳ ಉತ್ತಮ.
9.      ಡಿಸೆಂಬರ್       ಬಹಳ ಉತ್ತಮ ತಿಂಗಳು ನಿಮಗೆ. ಗೋಲ್ಡನ್ ಪೀರಿಯಡ್ ಅಂದರೆ ತಪ್ಪಾಗದು.
10. ಇನ್ನು ಜನುವರಿ ೨೦೧೭, ಫೆಬ್ರುವರಿ ಮತ್ತು ಮಾರ್ಚ್ ಕೂಡಾ ನಿಮಗೆ ಬಹಳ ಒಳ್ಳೆಯ ಸಮಯವೇ.

ಎಚ್ಚರಿಕೆ :-
1.      ಪಾರ್ಟ್ನರ್ಶಿಪ್ ಬಿಸಿನೆಸ್ಸ್ ಮಾಡದಿರಿ. ಮೋಸ ಹೋಗುವಿರಿ.
2.      ದೊಡ್ಡ ಇನ್ವೆಸ್ಟ್ಮೆಂಟ್ಸ್ ಎಲ್ಲಾ ವಿಚಾರಗಳನ್ನ ತಿಳಿದು ಮಾಡಿ.
3.      ಪ್ಲ್ಯಾನ್ ಇಲ್ಲದೆ ಪ್ರಯಾಣವನ್ನ ಮಾಡಬೇಡಿರಿ.

ಪರಿಹಾರ :-
1.       ಗುರುವಾರ ಗುರುವಾರ ಉಪವಾಸವನ್ನ ಮಾಡಿರಿ.
2.       ಬ್ರಾಹ್ಮಣರಿಗೆ ಹಳದಿ ವಸ್ತ್ರವನ್ನ ದಾನ ಮಾಡಿರಿ.



3.       
      
     ಸಿಲ್ವರ ನಾಣ್ಯವನ್ನ ನಿಮ್ಮ ಪರ್ಸ್ನಲ್ಲಿ ಲಕ್ಕಿಗೋಸ್ಕರ ಇಟ್ಟುಕೊಳ್ಳಿ.


ಪಾರಂಪಳ್ಳಿ ಸುರೇಂದ್ರ ಉಪಾಧ್ಯ


೦೫-೦೪-೨೦೧೬

No comments:

Post a Comment